alex Certify ಮಾಜಿ ಪ್ರಿಯಕರನ ಮೇಲೆ ಆರೋಪ: ಸಿಸಿ ಟಿವಿ ಪರಿಶೀಲನೆಯಲ್ಲಿ ಬಯಲಾಯ್ತು ರಹಸ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಜಿ ಪ್ರಿಯಕರನ ಮೇಲೆ ಆರೋಪ: ಸಿಸಿ ಟಿವಿ ಪರಿಶೀಲನೆಯಲ್ಲಿ ಬಯಲಾಯ್ತು ರಹಸ್ಯ

ವಿಲಕ್ಷಣ ಘಟನೆಯೊಂದರಲ್ಲಿ ಮಹಿಳೆ ಖಾಸಗಿ ಅಂಗಕ್ಕೆ ಮಾಜಿ ಪ್ರಿಯಕರ ಅಂಟುಗಳಿಂದ ಮುಚ್ಚಿ ಸೀಲ್ ಮಾಡಿದ್ದಾಗಿ ಆರೋಪಿಸಿದ್ದಾಳೆ. ಆಕೆ ಸುಳ್ಳು ಆರೋಪ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದ್ದು, ಆಕೆಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಬೆಂಬಿಂಬ್ರೆ ಪಟ್ಟಣದಲ್ಲಿ ಘಟನೆ ನಡೆದಿದ್ದು 36 ವರ್ಷದ ಮಹಿಳೆಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಆಕೆಯನ್ನು ವನೆಸಾ ಗೆಸ್ಟೋ ಎಂದು ಗುರುತಿಸಲಾಗಿದೆ. ತನ್ನ ಖಾಸಗಿ ಅಂಗಕ್ಕೆ ಸೀಲ್ ಮಾಡಿದ್ದಾನೆ ಎಂದು ಮಾಜಿ ಪ್ರಿಯಕರ 36 ವರ್ಷದ ಇವಾನ್ ರಿಕೋ ವಿರುದ್ಧ ದೂರು ನೀಡಿದ್ದು ತಪ್ಪು ಮಾಡಿರದಿದ್ದರೂ ಪ್ರಿಯಕರ ಜೈಲು ಶಿಕ್ಷೆ ಅನುಭವಿಸಿದ್ದಾನೆ.

ತನಿಖಾಧಿಕಾರಿಗಳು ಸೂಪರ್ ರ್ಮಾರ್ಕೆಟ್ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮಹಿಳೆ ತನ್ನ ಮೇಲೆ ಗಾಯ ಉಂಟುಮಾಡಬಲ್ಲ ಅಂಟಿಕೊಳ್ಳುವ ವಸ್ತುಗಳು ಮತ್ತು ಚಾಕುಗಳನ್ನು ಖರೀದಿಸುತ್ತಿರುವುದು ಗೊತ್ತಾಗಿದೆ. ಮಹಿಳೆ ನೀಡಿದ ಮಾಹಿತಿಯಂತೆ ಘಟನಾ ಸ್ಥಳದಲ್ಲಿ ಯಾವುದೇ ಕಪ್ಪು ಬಣ್ಣದ ಕಾರ್ ಹಾದು ಹೋಗಿರಲಿಲ್ಲ. ಆಕೆಯೇ ತನ್ನ ಖಾಸಗಿ ಅಂಗಕ್ಕೆ ಸೀಲ್ ಮಾಡಿಕೊಂಡಿರುವುದು ಗೊತ್ತಾಗಿದೆ.

ತಪ್ಪು ಮಾಡಿರದಿದ್ದರೂ ಆಕೆಯ ಮಾಜಿ ಪ್ರಿಯಕರನನ್ನು ಅನೇಕ ದಿನಗಳವರೆಗೆ ಜೈಲಿನಲ್ಲಿ ಇಡಲಾಗಿತ್ತು. ಉತ್ತರ ಸ್ಪೇನ್ ಲಿಯಾನ್ ನ್ಯಾಯಾಲಯ ಗುರುವಾರ ಆಕೆಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇನ್ನು ಮಾಜಿ ಪ್ರಿಯಕರ ಇವಾನ್ ರಿಕೋಗೆ ಪರಿಹಾರವಾಗಿ 25 ಸಾವಿರ ಯುರೋ ಪಾವತಿಸಲು ಆದೇಶಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...