ಒಂದಿಲ್ಲೊಂದು ವಿಚಾರಗಳಿಂದ ಚೀನಾ ಮೂಲದ ಟಿಕ್ಟಾಕ್ ಅಪ್ಲಿಕೇಶನ್ ಸುದ್ದಿ ಮಾಡ್ತಾನೇ ಇರುತ್ತೆ. ಟಿಕ್ಟಾಕ್ನ ಪರ ಹಾಗೂ ವಿರುದ್ಧದ ಚರ್ಚೆಗಳು ನಡೀತಾನೇ ಇರುತ್ತವೆ. ಈಗ ಭಾರತದಲ್ಲಿ ಟಿಕ್ಟಾಕ್ ಬ್ಯಾನ್ ಆಗಿರೋದು ಕೂಡ ಎಲ್ಲರಿಗೂ ತಿಳಿದಿರುವ ವಿಚಾರ.
ಟಿಕ್ಟಾಕ್ನಲ್ಲಿ ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಜೀವಕ್ಕೆ ಅಪಾಯ ಮಾಡಿಕೊಳ್ಳೋದ್ರಿಂದ ಪಾರಾಗಿದ್ದಾರೆ. ಹಿಮದ ಮೇಲೆ ಬರೆಯಲಾಗಿದ್ದ ಡೇಂಜರ್ ಚಿಹ್ನೆಯ ಬಗ್ಗೆ ಫಾಲೋವರ್ಸ್ ಮನವರಿಕೆ ಮಾಡಿಕೊಟ್ಟಿದ್ದರಿಂದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಕೆನಡಾದ ನ್ಯೂಫೌಂಡ್ಲ್ಯಾಂಡ್ನಲ್ಲಿ 27 ವರ್ಷದ ಜೇಡ್ ಜೂಲ್ಸ್ ಟಿಕ್ಟಾಕ್ ಮಾಡುತ್ತಿದ್ದ ಸ್ಥಳದಲ್ಲಿ 1 ಎಫ್ ಎಂದು ಬರೆಯಲಾಗಿತ್ತು. ಇದರ ಬಗ್ಗೆ ಅರಿವಿಲ್ಲದ ಜೂಲ್ಸ್ ವಿಡಿಯೋವನ್ನ ಟಿಕ್ಟಾಕ್ನಲ್ಲಿ ಅಪ್ಲೋಡ್ ಮಾಡಿದ್ದರು. ಅಲ್ಲದೇ ಈ ಚಿಹ್ನೆ ಬಗ್ಗೆ ಯಾರಾದರೂ ಮಾಹಿತಿ ಕೊಡಿ ಎಂದು ಕೇಳಿಕೊಂಡಿದ್ದಳು. ಆದರೆ ಅನೇಕರ ಅನುಯಾಯಿಗಳು ಎಫ್ 1 ಎಂಬುದು ನೊಟೋರಿಯಸ್ ಗ್ಯಾಂಗ್ನ ಚಿಹ್ನೆಯಾಗಿದೆ ಎಂದು ಹೇಳುತ್ತಿದ್ದಂತೆಯೇ ಮಹಿಳಾ ಟಿಕ್ಟಾಕರ್ ಗಾಬರಿಗೊಳಗಾಗಿದ್ದಾರೆ.
ಆದರೆ ತಜ್ಞರ ಮಾಹಿತಿ ಪ್ರಕಾರ ಅತ್ಯಾಚಾರ, ಕಳ್ಳತನದಂತಹ ಅಪರಾಧ ಕೃತ್ಯಗಳಿಗೆ ಬಹುಬೇಗ ಸಂತ್ರಸ್ತರು ಟಾರ್ಗೆಟ್ ಆಗುವ ಜಾಗವಿದು ಎಂಬರ್ಥವನ್ನ ಈ ಚಿಹ್ನೆ ನೀಡುತ್ತದೆಯಂತೆ . ಟಿಕ್ಟಾಕ್ ಫಾಲೋವರ್ಸ್ನಿಂದ ಮಾಹಿತಿ ಸಿಗುತ್ತಿದ್ದಂತೆಯೇ ಮಹಿಳೆ ಪೊಲೀಸರಿಗೆ ಈ ಬಗ್ಗೆ ತಿಳಿಸಿದ್ದಾಳೆ.