ಅದೃಷ್ಟ ಒಮ್ಮೊಮ್ಮೆ ಅಚಾನಕ್ ಆಗಿ ಎದುರುಬಂದು ಕೈಹಿಡಿದರೆ, ಇನ್ನೊಮ್ಮೆ ಕಣ್ಣಮುಂದೆ ಕೊಚ್ಚಿ ಹೋಗಿ ಬಿಡುತ್ತದೆ. ಇಂಥದ್ದೇ ಒಂದು ಘಟನೆ ಕ್ಯಾಲಿ ಫೋರ್ನಿಯಾದಲ್ಲಿ ನಡೆದಿದೆ.
ಮಹಿಳೆಯೊಬ್ಬರು ಕಳೆದ ವರ್ಷ ನವೆಂಬರ್‌ನಲ್ಲಿ ತಾನು ಖರೀದಿಸಿದ್ದ ಲಾಟರಿ ಟಿಕೆಟ್‌ಗೆ 26 ಮಿಲಿಯನ್ (190 ಕೋಟಿ ರೂ.) ಗೆದ್ದರೂ ಅದನ್ನು ಪಡೆದುಕೊಳ್ಳುವ ಯೋಗ ಒದಗಿ ಬಂದಿಲ್ಲ.
ಏಕೆಂದರೆ ಆ ಲಾಟರಿ ಟಿಕೆಟ್ ಬಟ್ಟೆ ವಾಶ್‌ನಲ್ಲಿ ನಾಶವಾಯಿತು ಎಂದು ಆಕೆಯೇ ಹೇಳಿಕೊಂಡಿದ್ದಾರೆ. ತಾನು ಜಾಕ್ಪಾಟ್ ಹೊಡೆದ ಟಿಕೆಟನ್ನು ಪ್ಯಾಂಟ್‌ನ ಜೇಬಿನಲ್ಲಿ ಹಾಗೆ ಮರೆತು ಇಟ್ಟು ಲಾಂಡ್ರಿ ಕಳಿಸಿದ್ದರಂತೆ.
ಕೋವಿಡ್ ಸೋಂಕಿತರಿಗಾಗಿ ಆಟೋದಲ್ಲೇ ಅಂಬುಲೆನ್ಸ್ ಸೇವೆ
2020ರ ನವೆಂಬರ್ 14ರ ಡ್ರಾ ಗೆದ್ದ ಸೂಪರ್‌ಲೊಟ್ಟೊ ಪ್ಲಸ್ ಟಿಕೆಟ್‌ನ್ನು ಲಾಸ್ ಏಂಜಲೀಸ್ ಉಪನಗರ ನಾರ್ವಾಕ್‌ನಲ್ಲಿರುವ ಅಂಗಡಿಯಿಂದ ಮಾರಾಟ ಮಾಡಲಾಗಿತ್ತು. ಡ್ರಾ ಬಳಿಕ ಅಂಗಡಿ ಸಿಸಿ ಕ್ಯಾಮರಾದಲ್ಲಿ ಟಿಕೆಟ್ ಖರೀದಿಸಿದ್ದು ಯಾರೆಂದು ಪತ್ತೆ ಹಚ್ಚಲಾಗಿದೆ. ಮಹಿಳೆಗೆ ವಿಷಯ ಮುಟ್ಟಿಸಿದಾಗ ಟಿಕೆಟ್ ಲಾಂಡ್ರಿಯಲ್ಲಿ ನಾಶವಾಗಿದ್ದು ಸ್ಪಷ್ಟಪಡಿಸಿದ್ದಾಳೆ.
ಬಳಿಕ ಅಂಗಡಿಯ ಸಿಸಿ ಕ್ಯಾಮರಾ ತುಣುಕಿನ ಪ್ರತಿಯನ್ನು ಕ್ಯಾಲಿಫೋರ್ನಿಯಾ ಲಾಟರಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಆದರೆ ಮಹಿಳೆಯ ಲಾಟರಿ ಹಕ್ಕು ಬಗ್ಗೆ ತನಿಖೆ ನಡೆಸಲಾಗುವುದು ಎಂದು ಲಾಟರಿ ನಿರ್ವಾಹಕ ವಕ್ತಾರ ತಿಳಿಸಿದ್ದಾರೆ. ಬಹುಮಾನ ಪಡೆಯಲು ಸಾಧ್ಯವಾಗದಿದ್ದರೆ ಆ ಹಣ ಕ್ಯಾಲಿಫೋರ್ನಿಯಾ ಸಾರ್ವಜನಿಕ ಶಾಲೆಗಳಿಗೆ ಹೋಗುತ್ತದೆ.