2020 ಬಹುತೇಕರ ಪಾಲಿಗೆ ಸಂಕಷ್ಟದ ವರ್ಷವಾಗಿ ಪರಿಣಮಿಸಿದೆ. ಕೊರೊನಾ ವೈರಸ್ ಸಂಕಷ್ಟ, ಲಾಕ್ಡೌನ್ ಅನೇಕರಿಗೆ ಸಂಕಷ್ಟವನ್ನ ತಂದೊಡ್ಡಿದೆ. ಆದರೆ ಇನ್ನು ಕೆಲವರಿಗೆ ಕೊರೊನಾ ಕಾರಣದಿಂದಾಗಿ ಮನೆಯಲ್ಲಿ ಕುಟುಂಬಸ್ಥರ ಜೊತೆ ಸಮಯ ಕಳೆಯೋಕೆ ಸಾಧ್ಯವಾಗಿದೆ.
ಇನ್ನು ಕೆಲವರಿಗೆ ದೂರದ ಊರಿನಲ್ಲಿರುವ ಕುಟುಂಬಸ್ಥರನ್ನ ಭೇಟಿಯಾಗಲು ಸಾಧ್ಯವಾಗದೇ ಹೋಗಿದೆ.
ತಾಯಿಯ ಜನ್ಮದಿನದಂದು ಸಪ್ರೈಸ್ ನೀಡಲು ನಿರ್ಧರಿಸಿದ ಮಗಳು ಟಾಯ್ ರೇ… ಲಾಕ್ಡೌನ್ನಿಂದಾಗಿ ಒಂದೂವರೆ ವರ್ಷಗಳ ಬಳಿಕ ತಾಯಿಯನ್ನ ಭೇಟಿಯಾಗುವ ಸಮಯದ ಬಗ್ಗೆ ಕಿಂಚಿತ್ತು ಗುಟ್ಟನ್ನ ತಾಯಿಯ ಬಳಿ ಬಿಟ್ಟುಕೊಟ್ಟಿರಲಿಲ್ಲ.
ಕೊರೊನಾ ಹೆಸರಲ್ಲಿ ನಕಲಿ ಲಸಿಕೆ ನೀಡುತ್ತಿದ್ದ ಔಷಧಿ ಕೇಂದ್ರದ ಮೇಲೆ ದಾಳಿ..!
ಬ್ರಿಸ್ಬೇನ್ ಗ್ರೀನ್ ಝೋನ್ ವ್ಯಾಪ್ತಿಗೆ ಬರುತ್ತಿದ್ದಂತೆಯೇ ತಾಯಿಯನ್ನ ಭೇಟಿಯಾಗಲು ನಿರ್ಧರಿಸಿದ ಟಾಯ್, ತನ್ನ ಮಲ ತಂದೆಯ ನೆರವಿನಿಂದ ಬರೋಬ್ಬರಿ ಒಂದೂವರೆ ವರ್ಷಗಳ ಬಳಿಕ ತಾಯಿಗೆ ಎದುರಾಗಿದ್ದಾಳೆ. ಈ ವೇಳೆ ಅಮ್ಮ ಮಗಳಿಬ್ಬರು ಪರಸ್ಪರ ತಬ್ಬಿಕ್ಕೊಂಡು ಕಣ್ಣೀರಾಕಿದ್ದು ಈ ಅಮೂಲ್ಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
https://www.instagram.com/p/CKcoGYIjztl/?utm_source=ig_web_copy_link