alex Certify ಡೋರ್​ ಕ್ಯಾಮರಾದಲ್ಲಿ ಸೆರೆಯಾಯ್ತು ಪುಟಾಣಿ ಡೈನಾಸೋರ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡೋರ್​ ಕ್ಯಾಮರಾದಲ್ಲಿ ಸೆರೆಯಾಯ್ತು ಪುಟಾಣಿ ಡೈನಾಸೋರ್​..!

ಮನೆಗೆ ಭದ್ರತೆ ಸಿಗಲಿ ಅಂತಾ ಡೋರ್​ ಕ್ಯಾಮರಾಗಳನ್ನ ಅಳವಡಿಸಲಾಗುತ್ತೆ. ಆದರೆ ಕೆಲವೊಮ್ಮೆ ಈ ಡೋರ್​ ಕ್ಯಾಮರಾಗಳಲ್ಲಿ ಸೆರೆಯಾಗುವ ಕೆಲ ದೃಶ್ಯಗಳು ಭದ್ರತೆಗಿಂತ ಜಾಸ್ತಿ ಗೊಂದಲವನ್ನೇ ಸೃಷ್ಟಿ ಮಾಡುತ್ತೆ. ವಿಶೇಷವಾಗಿ ರಾತ್ರಿ ಸಮಯದಲ್ಲಂತೂ ಡೋರ್​ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಗಳನ್ನ ಅರ್ಥ ಮಾಡಿಕೊಳ್ಳೋದೇ ಕಷ್ಟದ ಕೆಲಸ.

ಇದೇ ರೀತಿಯ ಪ್ರಕರಣದಲ್ಲಿ ಕ್ರಿಸ್ಟಿನಾ ರ್ಯಾನ್​ ಎಂಬವರು ತಮ್ಮ ಮನೆಯ ಡೋರ್ ಕ್ಯಾಮರಾದಲ್ಲಿ ಪುಟ್ಟ ಡೈನಾಸೋರ್​​ ಸೆರೆಯಾಗಿದೆ ಎಂದು ಹೇಳಿದ್ದು ಈ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಸುದ್ದಿ ಮಾಡ್ತಿದ್ದಾರೆ.

ಈ ದೃಷ್ಟಿ ಭ್ರಮೆಯ ವಿಡಿಯೋ ನೋಡ್ತಿದ್ರೆ ನಿಮ್ಮ ಕಣ್ಣುಗಳನ್ನೇ ನೀವು ನಂಬಲಾರಿರಿ…!

ನಮ್ಮ ಡೋರ್​ ಕ್ಯಾಮರಾದಲ್ಲಿ ಮುಂಜಾನೆ ವಿಚಿತ್ರ ದೃಶ್ಯ ಸೆರೆಯಾಗಿದೆ . ಈ ದೃಶ್ಯಾವಳಿಗಳ ಪ್ರಕಾರ ಗಾರ್ಡನ್​ ಮುಂದೆ ಪುಟ್ಟ ಡೈನಾಸೋರ್​ ಓಡಿದಂತೆ ಭಾಸವಾಗ್ತಿದೆ ಎಂದು ಹೇಳಿದ್ದಾರೆ. ಅಂದಹಾಗೆ ರ್ಯಾನ್​ ಕಣ್ಣಿಗೆ ಮಾತ್ರ ಈ ಪ್ರಾಣಿ ಡೈನಾಸೋರ್​ನಂತೆ ಕಂಡಿಲ್ಲ. ಬದಲಾಗಿ ವಿಡಿಯೋ ನೋಡಿದ ನೆಟ್ಟಿಗರೂ ಅರೆ..! ಈ ಪ್ರಾಣಿ ಡೈನಸಾರ್​ನಂತೆ ಇದೆಯಲ್ಲ ಎಂದು ಹೇಳ್ತಿದ್ದಾರೆ. ಕೆಲವರು ಮಾತ್ರ ಇದು ನವಿಲಾಗಿರಬಹುದೆಂದು ಹೇಳ್ತಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...