alex Certify ಕೊರೋನಾದಿಂದ ಸಾವಿಗೀಡಾಗಿದ್ದಾಳೆಂದು ಭಾವಿಸಿದ್ದ ಮಹಿಳೆ ಎದ್ದು ಬಂದಾಗ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾದಿಂದ ಸಾವಿಗೀಡಾಗಿದ್ದಾಳೆಂದು ಭಾವಿಸಿದ್ದ ಮಹಿಳೆ ಎದ್ದು ಬಂದಾಗ…!

Why is coronavirus killing more men than women? | WIRED UKಕೊರೊನಾ ಭಯದಲ್ಲಿ ಕುಟುಂಬಸ್ಥರು ಬೇರೆ ಮಹಿಳೆಯ ಅಂತ್ಯಸಂಸ್ಕಾರ ಮಾಡಿ ಪೇಚಿಗೆ ಸಿಲುಕಿದ ಘಟನೆ ಈಕ್ವೆಡಾರ್ ನಲ್ಲಿ ನಡೆದಿದೆ.

74 ವರ್ಷದ ಆಲ್ಬಾ ಮಾರುರಿ ಎಂಬುವರು ಜ್ವರ ಮತ್ತು ಉಸಿರಾಟದ ತೊಂದರೆ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರು. ಮೂರು ವಾರ ಪ್ರಜ್ಞಾ ಶೂನ್ಯರಾದರು.

ಬಳಿಕ ಇತ್ತೀಚೆಗೆ ಅವರು ಮೃತಪಟ್ಟರೆಂದು ಆಸ್ಪತ್ರೆ ಘೋಷಿಸಿತು, ಕುಟುಂಬಸ್ಥರು ಕೊರೊನಾ ಹಿನ್ನೆಲೆಯಲ್ಲಿ ದೂರದಿಂದಲೇ ಮಹಿಳೆಯೊಬ್ಬರ ಮೃತ ದೇಹ ವೀಕ್ಷಿಸಿತು, ನಂತರ ಅಂತ್ಯಕ್ರಿಯೆ ನೆರವೇರಿಸಿತು.

ಆದರೆ, ಅಚ್ಚರಿಯೊಂದು ಕಾದಿತ್ತು. ಪ್ರಜ್ಞಾವಸ್ಥೆಯಲ್ಲಿದ್ದ ಆಲ್ಬಾಮಾರಿಗೆ ಎಚ್ಚರವಾಗಿದ್ದು, ತನ್ನ ಸಹೋದರಿ ಹೆಸರು ಹೇಳಿದ್ದಾರೆ.‌ ಆಸ್ಪತ್ರೆಯು ಕುಟುಂಬಸ್ಥರಿಗೆ ವಿಚಾರ ಮುಟ್ಟಿಸಿದ್ದಾರೆ. ಕುಟುಂಬದವರಿಗೆ ಅಚ್ಚರಿಯೋ ಅಚ್ಚರಿ, ಹಾಗಿದ್ದರೆ ತಾವು ಅಂತ್ಯ ಸಂಸ್ಕಾರ ಮಾಡಿದ ಮಹಿಳೆ ಯಾರು, ತಮ್ಮ‌ ಮನೆಯಲ್ಲಿದ್ದ ಚಿತಾಭಸ್ಮ ಯಾರದ್ದು ಎಂಬ ಪ್ರಶ್ನೆ ಕಾಡಿದೆ. ತಮ್ಮ ಸಂಬಂಧಿ ಮೃತಪಟ್ಟಳೆಂದು ಒಂದು ತಿಂಗಳಿಂದ ಕೊರಗಿದ್ದ ಕುಟುಂಬ ಈಗ ಖುಷಿಯಲ್ಲಿದೆ ಮತ್ತು ಆಸ್ಪತ್ರೆ ವಿರುದ್ಧ ದೂರು ನೀಡಲು ಮುಂದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...