alex Certify ಸತ್ತಂತೆ ನಟಿಸಿ ಕಾಡೆಮ್ಮೆ ದಾಳಿಯಿಂದ ಬಚಾವಾದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸತ್ತಂತೆ ನಟಿಸಿ ಕಾಡೆಮ್ಮೆ ದಾಳಿಯಿಂದ ಬಚಾವಾದ ಮಹಿಳೆ

ಸತ್ತಂತೆ ನಟಿಸುವ ಮೂಲಕ ಮಹಿಳೆಯೊಬ್ಬರು ಕಾಡೆಮ್ಮೆ ದಾಳಿಯಿಂದ ಆಶ್ಚರ್ಯಕರ ರೀತಿಯಲ್ಲಿ ಬಚಾವಾದ ಪ್ರಕರಣ ಅಮೆರಿಕಾದಲ್ಲಿ ನಡೆದಿದೆ.

ಬಯಲು ಪ್ರದೇಶದಲ್ಲಿ ದಂಪತಿ ನಡೆದು ಹೋಗುತ್ತಿದ್ದಾಗ ಏಕಾಏಕಿ ಕಾಡೆಮ್ಮೆ ದಾಂಗುಡಿಯಿಟ್ಟು ನುಗ್ಗಿ ಬಂದಿದೆ. ಪತಿ ಅಲ್ಲಿಂದ ಹಾಗೂ ಹೀಗು ಪಾರಾಗಿದ್ದಾರೆ. ಪತ್ನಿ ಮಾತ್ರ ಉರುಳಿ ಬಿದ್ದಿದ್ದಾರೆ. ಕಾಡೆಮ್ಮೆ ಆಕೆಯತ್ತ ನುಗ್ಗಿದೆ. ಆದರೆ ಆ ಕ್ಷಣದಲ್ಲಿ ಆಕೆ ಮಾಡಿದ ನಿರ್ಧಾರ ಜೀವವನ್ನು ಉಳಿಸಿದೆ. ಅಷ್ಟೇ ಅಲ್ಲದೆ ಒಂದು ಸಣ್ಣ ತರಚು ಗಾಯ ಸಹ ಆಗಿಲ್ಲ.

ನೆಲದ ಮೇಲೆ ಉರುಳುತ್ತಿದ್ದಂತೆ ಆಕೆ ಸತ್ತಂತೆ ನಟಿಸಿ ಬಿಟ್ಟಳು. ಮಿಸುಕಾಡದೆ ಮಲಗಿದರು. ಇದರಿಂದ ಕಾಡೆಮ್ಮೆ ಹಾಗೆ ಅಲ್ಲಿಂದ ಪಕ್ಕಕ್ಕೆ ಹೋಗಿದೆ.

ಅಮೆರಿಕಾದ ಮೊಂಟಾನಾದ ಯೆಲ್ಲೊಸ್ಟೋನ್ ರಾಷ್ಟ್ರೀಯ ಉದ್ಯಾನದ ನೆಜ್ ಪರ್ಸೆ ಕ್ರೀಕ್ ಎಂಬಲ್ಲಿ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ ಈ ರಾಷ್ಟ್ರೀಯ ಉದ್ಯಾನದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಆನೇಕ ಬಾರಿ ಮನುಷ್ಯರ ಮೇಲೆ ಕಾಡೆಮ್ಮೆ ದಾಳಿಗಳು ನಡೆದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...