ಮ್ಯಾಂಚೆಸ್ಟರ್ನ 21 ವರ್ಷದ ಯುವತಿಯೊಬ್ಬಳು ತನ್ನ ತಂದೆ ಹಾಗೂ ಮಾಜಿ ಗೆಳೆಯನಿಗೆ ಮಗುವನ್ನ ಹೊಂದಲು ನೆರವಾಗುವ ಸಲುವಾಗಿ ತನ್ನ ಅಂಡಾಣುಗಳನ್ನ ದಾನ ಮಾಡಲು ನಿರ್ಧರಿಸಿದ್ದಾಳೆ.
ಸ್ಯಾಫ್ರೋನ್ ಎಂಬಾಕೆಯ ತಂದೆ ಬ್ಯಾರಿ ಡ್ರೆವಿಟ್ ಬಾರ್ಲೋ ಬ್ರಿಟನ್ನ ಸಲಿಂಗಕಾಮಿ ತಂದೆಗಳಲ್ಲಿ ಇವರೂ ಒಬ್ಬರು. ಸ್ಯಾಫ್ರೋನ್ಳ ಮಾಜಿ ಸಂಗಾತಿ ಸ್ಕಾಟ್ ಎಂಬಾತ ದ್ವಿಲಿಂಗಿಯಾದ ಕಾರಣ ಬ್ಯಾರಿ ಹಾಗೂ ಸ್ಕಾಟ್ ಬಾಡಿಗೆ ತಾಯಿ ಮೂಲಕ ಸೆಪ್ಟೆಂಬರ್ ತಿಂಗಳಲ್ಲಿ ಮೊದಲ ಹೆಣ್ಣು ಮಗುವನ್ನ ಪಡೆದಿದ್ದಾರೆ.
ತಮ್ಮ ಮೊದಲ ಮಗುವಿನೊಂದಿಗೆ ಮ್ಯಾಂಜೆಸ್ಟರ್ನಲ್ಲಿ ಸ್ಕಾಟ್ ಹಾಗೂ ಬ್ಯಾರಿ ವಾಸಿಸುತ್ತಿದ್ದಾರೆ. ಸ್ಯಾಫ್ರೋನ್ ಇವರಿಬ್ಬರಿಗೆ ತನ್ನ ಅಂಡಾಣುಗಳನ್ನ ದಾನ ಮಾಡಲು ಒಪ್ಪಿಗೆ ನೀಡಿದ ಬಳಿಕ ಇದೀಗ ಈ ಸಲಿಂಗ ಕಾಮಿಗಳು ಎರಡನೇ ಮಗುವನ್ನ ಪಡೆಯಲು ಉತ್ಸುಕರಾಗಿದ್ದಾರೆ.
ಈ ವಿಚಾರ ನಿಮಗೆ ತೀರಾ ಗೊಂದಲ ಎನಿಸಬಹುದು. ಈ ಹಿಂದೆ ಟೋನಿಯೊಂದಿಗೆ ಸಂಬಂದ ಹೊಂದಿದ್ದ ಸಲಿಂಗಕಾಮಿ ಬ್ಯಾರಿ ಸ್ಯಾಫ್ರೋನ್ಳನ್ನ ಬಾಡಿಗೆ ತಾಯಿಯಿಂದ ಪಡೆದಿದ್ದರು. ಇದೀಗ ತನ್ನ ಮಗಳ ಮಾಜಿ ಪ್ರಿಯತಮ ಸ್ಕಾಟ್ನೊಂದಿಗೆ ಸಂಬಂಧ ಹೊಂದಿರುವ ಬ್ಯಾರಿ ಈಗಾಗಲೇ ಒಂದು ಮಗುವನ್ನ ಪಡೆದಿದ್ದಾರೆ. ಇದೀಗ ಮಗಳ ಅಂಡಾಣು ಸಹಾಯದಿಂದಲೇ ಇನ್ನೊಂದು ಮಗುವನ್ನ ಹೊಂದೋಕೆ ಬ್ಯಾರಿ ತಯಾರಿ ನಡೆಸಿದ್ದಾರೆ.