alex Certify ‘ಉದ್ಯೋಗ’ ಸಿಗದ ಹಿಂದಿನ ಕಾರಣ ನೋಡಿ ದಂಗಾದ ಯುವತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಉದ್ಯೋಗ’ ಸಿಗದ ಹಿಂದಿನ ಕಾರಣ ನೋಡಿ ದಂಗಾದ ಯುವತಿ…!

Resume errors| Woman notices hilarious error on resume after failing to get  a job for 3 months | Trending & Viral Newsಯಾವುದೇ ಕೆಲಸದ ಸಂದರ್ಶನಕ್ಕೆ ಹಾಜರಾಗುವ ಮುನ್ನ ನಿಮ್ಮ ರೆಸ್ಯೂಮ್​ನ್ನ ತಯಾರು ಮಾಡಿಕೊಳ್ಳಬೇಕಾಗುತ್ತೆ. ಈ ರೆಸ್ಯೂಮ್​ನಲ್ಲಿ ಯಾವುದೇ ತಪ್ಪಾಗದಂತೆ ನೋಡಿಕೊಳ್ಳಬೇಕು ಅಂತಾ ಅನೇಕರು ಎರಡ್ಮೂರು ಬಾರಿ ರೆಸ್ಯೂಮ್​​ನ್ನ ಪರೀಕ್ಷೆ ಮಾಡ್ತಾರೆ. ಆದರೆ ಎಂದಾದರೂ ರೆಸ್ಯೂಮ್​​ನಲ್ಲಿ ಮಾಡಬಾರದ ತಪ್ಪನ್ನ ಮಾಡಿ ಸಿಕ್ಕಿ ಹಾಕಿಕೊಂಡಿದ್ದೀರಾ..?

ರೆಸ್ಯೂಮ್​ನಲ್ಲಿ ಮಾಡಿದ ಬಹುದೊಡ್ಡ ತಪ್ಪಿನಿಂದ ತನ್ನ ಗೆಳತಿ ಹೇಗೆ ಕೆಲಸ ಕಳೆದುಕೊಂಡಳು ಅನ್ನೋ ವಿಚಾರವನ್ನ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದಾನೆ. ಅಂದಹಾಗೆ ಆಕೆಯ ರೆಸ್ಯೂಮ್​​ನಲ್ಲಿ ಆಗಿದ್ದು ಸಣ್ಣ ತಪ್ಪಲ್ಲ. ಬದಲಾಗಿ ಆಕೆಯ ಹೆಸರೇ ಪ್ರಿನ್ಸೆಸ್ ಬನಾನಾ ಎಂದು ತಪ್ಪಾಗಿ ಟೈಪ್​ ಆಗಿತ್ತು.

ಅಂದಹಾಗೆ ಇದು ಮೂರು ತಿಂಗಳ ಹಿಂದೆ ನಡೆದ ಘಟನೆಯಾಗಿದೆ. ನನ್ನ ಗೆಳತಿ ಯಾವುದೋ ಮನೆ ಕೆಲಸದಲ್ಲಿ ಬ್ಯುಸಿ ಆಗಿದ್ದಳು. ಈ ವೇಳೆ ಆಕೆ ನನ್ನ ಬಳಿ ಕಂಪ್ಯೂಟರ್​ನಲ್ಲಿದ್ದ ರೆಸ್ಯೂಮ್​ನ್ನು ಸೇವ್​ ಮಾಡುವಂತೆ ಹೇಳಿದ್ದಳು. ನಾನು ಮಾಡಬೇಕಾಗಿದ್ದದ್ದು ಇಷ್ಟೇ. ಆಕೆಯ ಕಂಪ್ಯೂಟರ್​ ನಲ್ಲಿ ಅವಳು ಸಿದ್ಧಪಡಿಸಿದ್ಧ ರೆಸ್ಯೂಮ್​ನ್ನ ಅವಳ ಹೆಸರಿನಲ್ಲಿ ಸೇವ್​ ಮಾಡಬೇಕಿತ್ತು.

ಈ ವೇಳೆ ಆಕೆಯ ಹೆಸರು ರಾಜಕುಮಾರಿ ಬಾಳೆಹಣ್ಣು ಎಂದು ಫನ್ನಿಯಾಗಿ ಸೇವ್​ ಆಗಿದೆ. ರೆಸ್ಯೂಮ್​ನಲ್ಲಿ ಆಕೆಯ ಹೆಸರು ಕೂಡ ತಪ್ಪಾಗಿ ನಮೂದಾದ ಕಾರಣ ಅವಾಂತರವಾಗಿದೆ ಎಂಬ ವಿಚಾರವನ್ನ ರೆಡ್ಡಿಟ್​ನಲ್ಲಿ ಶೇರ್​ ಮಾಡಿದ್ದಾರೆ. ನೆಟ್ಟಿಗರು ಈ ಘಟನೆಯನ್ನ ಓದಿದ ಬಳಿಕ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಇನ್ನೂ ಹಲವರು ಆಕೆ ಒಮ್ಮೆ ತನ್ನ ರೆಸ್ಯೂಮ್​ ಮರುಪರಿಶೀಲನೆ ಮಾಡಬೇಕಿತ್ತು ಎಂದು ಅಭಿಪ್ರಾಯ ಹೊರಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...