alex Certify ಒಂದಲ್ಲ ಎರಡಲ್ಲ ಬರೋಬ್ಬರಿ 10 ಮದುವೆಯಾಗಿದ್ದಾಳೆ ಈ ಮಹಿಳೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದಲ್ಲ ಎರಡಲ್ಲ ಬರೋಬ್ಬರಿ 10 ಮದುವೆಯಾಗಿದ್ದಾಳೆ ಈ ಮಹಿಳೆ…!

ಸರಿಯಾದ ಜೀವನ ಸಂಗಾತಿಯನ್ನ ಹುಡುಕಲಿಕ್ಕೋಸ್ಕರ ಮಹಿಳೆಯೊಬ್ಬಳು ಬರೋಬ್ಬರಿ 10 ಬಾರಿ ಮದುವೆಯಾಗಿರುವ ಘಟನೆ ಯುಎಸ್​ನಲ್ಲಿ ಬೆಳಕಿಗೆ ಬಂದಿದೆ.

ಕ್ಯಾಸ್ಸಿ ಎಂಬ ಹೆಸರಿನ 56 ವರ್ಷದ ಮಹಿಳೆ ಈ ರೀತಿ 10 ಬಾರಿ ಮದುವೆಯಾಗಿದ್ದಾಳೆ. ಈಕೆಯ ಮದುವೆಯಾದವರಲ್ಲಿ ಒಬ್ಬರ ಜೊತೆ ಗರಿಷ್ಟ ಅಂದ್ರೆ 8 ವರ್ಷಗಳ ಕಾಲ ಸಂಸಾರ ಮಾಡಿದ್ದಾಳೆ. ಆಕೆಯ ಅತಿ ಕಡಿಮೆ ದಾಂಪತ್ಯದ ಅವಧಿ ಎಂದರೆ 6 ತಿಂಗಳು. ಇದೀಗ ಈಕೆ ತನ್ನ 10 ನೇ ಪತಿಗೆ ವಿಚ್ಛೇದನ ನೀಡಲು ಸಿದ್ಧತೆ ನಡೆಸುತ್ತಿದ್ದಾಳೆ.

ಕ್ಯಾಸಿ ತನ್ನ ಮೊದಲನೇ ವಿವಾಹವನ್ನ 8 ವರ್ಷಕ್ಕೆ ಅಂತ್ಯಗೊಳಿಸಿದ್ರು. ಎರಡನೇ ಮದುವೆ 7 ವರ್ಷಗಳ ಕಾಲ ಮುಂದುವರಿದಿತ್ತು. ಇದೀಗ 10ನೇ ಮದುವೆಯನ್ನೂ ಕೊನೆಗಾಣಿಸುತ್ತಿರೋದ್ರ ಬಗ್ಗೆ ಮಾತನಾಡಿದ ಕ್ಯಾಸಿ, ನನಗೆ ಎಷ್ಟು ಮದುವೆ ಆಗಿದ್ದೀನಿ ಅನ್ನೋದು ಮುಖ್ಯ ಅಲ್ಲ. ಒಳ್ಳೆಯ ಸಂಗಾತಿ ಸಿಗುವವರೆಗೂ ನಾನು ಮದುವೆಯಾಗುತ್ತಲೇ ಇರುತ್ತೇನೆ ಅಂತಾ ಹೇಳಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...