ಅಮೆರಿಕದ ಉತ್ತರ ಕರೋಲಿನಾ ರಾಜ್ಯದ ಮಹಿಳೆಯೊಬ್ಬರು ತಮ್ಮ ಮನೆಗೆ ಎರಡು ತಲೆಗಳ ಹಾವೊಂದು ನುಸುಳಿರುವುದನ್ನು ಕಂಡು ಬೆಕ್ಕಸ ಬೆರಗಾಗಿದ್ದಾರೆ. ಅಲೆಕ್ಸಾಂಡರ್ ಕೌಂಟಿಯವರಾದ ಜೀನ್ ವಿಲ್ಸನ್ ಹೆಸರಿನ ಈಕೆ ತಮ್ಮ ಮನೆಯ ಸನ್ ರೂಂನಲ್ಲಿ ಈ ಹಾವನ್ನು ಕಂಡಿದ್ದಾರೆ.
ಸರೀಸೃಪದ ಪುಟ್ಟದೊಂದು ವಿಡಿಯೋವನ್ನು ಮಾಡಲು ಸಫಲರಾದ ವಿಲ್ಸನ್, ಅದನ್ನು ಫೇಸ್ಬುಕ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಹಾವು ವಿಷರಹಿತವಾದದ್ದಾಗಿದೆ.
ಟೇಬಲ್ ಕೆಳಗೆ ಕ್ಲೀನ್ ಮಾಡುವಾಗ ಕಂಡ ಹಾವಿಗೆ ಒಂಚೂರೂ ಗಾಯವಾಗದಂತೆ ಪುಟ್ಟದೊಂದು ಜಾರಿನಲ್ಲಿ ಹಾಕಿಕೊಂಡ ವಿಲ್ಸನ್, ಅದನ್ನು ಕಟಾವಾಬಾ ವಿಜ್ಞಾನ ಕೇಂದ್ರಕ್ಕೆ ಒಪ್ಪಿಸಿದ್ದಾರೆ. ಇದು ಇಲಿ ಹಾವು ಎಂದು ತಿಳಿದುಬಂದಿದೆ.
https://www.facebook.com/jeannie.simmons.77/videos/3607952949228499/?t=2