ಮತ್ತೊಬ್ಬ ಮಹಿಳೆಯೊಂದಿಗೆ ಸಲಿಂಗಕಾಮದಲ್ಲಿ ಭಾಗಿಯಾಗಿದ್ದ ಕಾರಣ ಆಕೆಯ ಪತಿಗೆ 11,00,00 ಯೆನ್ (70,000 ರೂ.ಗಳು) ದಂಡ ಪಾವತಿ ಮಾಡಲು ಮಹಿಳೆಯೊಬ್ಬರಿಗೆ ಜಪಾನ್ ನ್ಯಾಯಾಲಯ ಆದೇಶ ನೀಡಿದೆ.
ಟೋಕಿಯೋ ಜಿಲ್ಲಾ ನ್ಯಾಯಾಲಯ ಈ ಆದೇಶ ನೀಡಿದೆ. ತನ್ನ ಮಡದಿಯೊಂದಿಗೆ ಈಕೆ ಸೆಕ್ಸ್‌ನಲ್ಲಿ ಭಾಗಿಯಾಗಿದ್ದಾರೆ ಎಂದು ಪತಿರಾಯ ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇಬ್ಬರೂ ಆನ್ಲೈನ್ ಮೂಲಕ ಭೇಟಿಯಾಗಿದ್ದು, ಇಲ್ಲಿಯವರೆಗೂ ಮುಂದುವರೆದಿದ್ದಾರೆ ಎಂದು ಆತ ಆಪಾದಿಸಿದ್ದಾನೆ.
ಇದಕ್ಕೆ ಪ್ರತಿಕ್ರಿಯಿಸಿದ ಆಪಾದಿತ ಮಹಿಳೆ, ತನ್ನ ನಡೆಯಿಂದ ವೈವಾಹಿಕ ಜೀವನ ಹಾಳಾಗುವುದಾಗಲೀ, ಅನೈತಿಕ ಕೃತ್ಯವಾಗಲೀ ಏನೂ ಆಗಿಲ್ಲವೆಂದಿದ್ದಾರೆ. ಆದರೆ ತನ್ನ ಸಂಗಾತಿಯ ಪತಿಗೆ ದಂಡ ಕಟ್ಟಿಕೊಡಲು ನ್ಯಾಯಾಲಯ ಆದೇಶ ನೀಡಿದೆ.
ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಟ್ಯೂಲಿಪ್ ಉದ್ಯಾನ
ಕಳೆದ ವರ್ಷ ಇಂಥದ್ದೇ ಒಂದು ಪ್ರಕರಣದಲ್ಲಿ, ಮಹಿಳೆಯೊಬ್ಬರು ತಮ್ಮ ಮಹಿಳಾ ಲೈಂಗಿಕ ಸಂಗಾತಿಗೆ ಮೋಸ ಮಾಡಿದ ಕಾರಣ ಆಕೆಗೆ ದಂಡ ಕಟ್ಟಿಕೊಡಲು ಇದೇ ನ್ಯಾಯಾಲಯ ಆದೇಶ ಕೊಟ್ಟಿತ್ತು.
ಈ ಇಬ್ಬರು ಸಲಿಂಗಿಗಳು ಏಳು ವರ್ಷಗಳ ಕಾಲ ಜೊತೆಯಾಗಿದ್ದರು. ಅಮೆರಿಕದಲ್ಲಿ ಮದುವೆಯಾದ ಈ ಇಬ್ಬರು ಮಕ್ಕಳನ್ನು ಹೊಂದಲು ಚರ್ಚಿಸಿದ್ದರು. ಆದರೆ ಈ ಪ್ರಕರಣದಲ್ಲೂ ಸಹ ಆಪಾದಿತೆಗೆ 1.1 ದಶಲಕ್ಷ ಯೆನ್ ದಂಡ ವಿಧಿಸಿತ್ತು ನ್ಯಾಯಾಲಯ.
ವಿರುದ್ಧ ಲಿಂಗಿಗಳ ವೈವಾಹಿಕ ಜೀವನಕ್ಕೆ ಅನ್ವಯಿಸುವ ನಿಯಮಗಳೇ ಸಲಿಂಗಿಗಳ ವೈವಾಹಿಕ ಜೀವನಕ್ಕೂ ಅನ್ವಯಿಸುತ್ತವೆ ಎಂದು ಟೋಕಿಯೋ ಹೈಕೋರ್ಟ್ ತಿಳಿಸಿತ್ತು.