alex Certify ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಟ್ಯೂಲಿಪ್ ಉದ್ಯಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಟ್ಯೂಲಿಪ್ ಉದ್ಯಾನ

ಕಾಶ್ಮೀರದ ಟ್ಯೂಲಿಪ್ ಉದ್ಯಾನವು ಗುರುವಾರದಿಂದ ಪ್ರವಾಸಿಗರಿಗೆ ತೆರೆದುಕೊಂಡಿದೆ. 15 ಲಕ್ಷದಷ್ಟು ಟ್ಯೂಲಿಪ್ ಹೂವುಗಳನ್ನು ಹೊಂದಿರುವ ಈ ಸುಂದರ ಉದ್ಯಾನವನವು ಜಬರ್ವಾನ್ ಗುಡ್ಡೆಯ ಬುಡದಲ್ಲಿ ಇದ್ದು, ಇದು ಏಷ್ಯಾದ ಅತಿ ದೊಡ್ಡ ಟ್ಯೂಲಿಪ್ ಉದ್ಯಾನವನವಾಗಿದೆ.

ಶ್ರೀನಗರದಲ್ಲಿರುವ ಈ ಉದ್ಯಾನದ ಸುಂದರ ಚಿತ್ರಗಳನ್ನು ಖುದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಟ್ವಿಟರ್‌ ಖಾತೆ ಮೂಲಕ ಶೇರ್‌ ಮಾಡಿಕೊಂಡಿದ್ದಾರೆ. ಈ ವರ್ಷದಲ್ಲಿ 64ಕ್ಕೂ ಹೆಚ್ಚು ತಳಿಯ ಟ್ಯೂಲಿಪ್‌ಗಳು ಅರಳಲಿವೆ ಎಂದು ಪ್ರಧಾನಿ ತಿಳಿಸಿದ್ದು, “ಮಾರ್ಚ್ 25 ಜಮ್ಮು ಮತ್ತು ಕಾಶ್ಮೀರಕ್ಕೆ ಬಹಳ ವಿಶೇಷವಾದ ದಿನವಾಗಿದೆ. ಜಬರ್ವಾನ್ ಪರ್ವತದ ಬುಡದಲ್ಲಿರುವ ಈ ಸುಂದರ ಉದ್ಯಾನದಲ್ಲಿ 64ಕ್ಕೂ ಹೆಚ್ಚು ವಿಧದ 15 ಲಕ್ಷಕ್ಕೂ ಹೆಚ್ಚು ಹೂವುಗಳು ಅರಳಲಿವೆ” ಎಂದು ಟ್ವೀಟ್ ಮಾಡಿದ್ದಾರೆ.

ತಪ್ಪಾಗಿ ಉಚ್ಛಾರವಾಗುವ ಈ ಕಾಮನ್ ವರ್ಡ್ಸ್ ಬಗ್ಗೆ ನಿಮಗೆಷ್ಟು ಗೊತ್ತು….?

ದಾಲ್ ಸರೋವರದ ದಂಡೆಯ ಮೇಲೆ 600 ಎಕರೆಯಷ್ಟು ಪ್ರದೇಶದಲ್ಲಿ ಈ ಉದ್ಯಾನ ಹಬ್ಬಿದೆ. ಕೋವಿಡ್-19 ಸೋಂಕಿನ ಭೀತಿಯ ನಡುವೆ ಸಕಲ ಮುನ್ನೆಚ್ಚರಿಕಾ ಕ್ರಮಗಳನ್ನೂ ತೆಗೆದುಕೊಳ್ಳಲಾಗಿದೆ ಎಂದು ಪುಷ್ಫೋದ್ಯಮ ಇಲಾಖೆಯ ನಿರ್ದೇಶಕ ಫರೂಖ್ ಅಹಮದ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...