ಕೊರೋನಾ ಸಾಂಕ್ರಾಮಿಕ ಹೆಚ್ಚೆಚ್ಚು ಹರಡುತ್ತಿರುವಂತೆ ವಿಶ್ವದ ಬಹುತೇಕ ದೇಶಗಳಲ್ಲಿ ಮಾಸ್ಕ್ ಬಳಕೆ ಕಡ್ಡಾಯ ಇದೆ. ಅಂಥದ್ದರಲ್ಲಿ ಇಲ್ಲೊಂದು ಜೋಡಿ ಮಾಸ್ಕ್ ಧರಿಸುವ ಬದಲು ಮಾಸ್ಕ್ ಧರಿಸಿದಂತೆಯೇ ಕಾಣುವ ಪೇಂಟ್ ಅನ್ನು ಮುಖಕ್ಕೆ ಹಚ್ಚಿಕೊಂಡು ಬಂದು ಸಿಕ್ಕಿಬಿದ್ದಿದೆ. ಹಾಗೆಯೇ ದುಬಾರಿ ಬೆಲೆ ತೆರಬೇಕಾಗಿ ಬಂದಿದೆ.
ಇಂಡೋನೇಷ್ಯಾವು ಈ ವಲಸೆ ಜೋಡಿಯ ಪಾಸ್ಪೋರ್ಟ್ಗಳನ್ನು ವಶಪಡಿಸಿಕೊಂಡಿದೆ, ಗಡಿಪಾರು ಮಾಡುವ ಸಾಧ್ಯತೆಯೂ ಇದೆ.
ಸಮುದ್ರದಾಳದಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ…!
ರಷ್ಯಾ ಪ್ರಜೆ ಲಿಯಾ ಮತ್ತು ತೈವಾನಿನ ಜೋಶ್ ಮಾಸ್ಕ್ ತೊಡಲು ಉದಾಸೀನ ಮಾಡಿ ಮುಖಕ್ಕೆ ಬಣ್ಣ ಬಳಿದುಕೊಂಡು ಬಂದಿದ್ದರು. ಸೂಪರ್ ಮಾರ್ಕೆಟ್ನಲ್ಲಿ ಇವರ ಅವತಾರವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಅದು ವೈರಲ್ ಆಗಿ ಕೊನೆಗೆ ಸ್ಥಳೀಯ ಆಡಳಿತ ಅವರಿಬ್ಬರ ಪಾಸ್ ಪೋರ್ಟ್ ಸೀಜ್ ಮಾಡಿದೆ.
https://www.youtube.com/watch?v=2sC0TFzxMj4&feature=emb_logo