ನೀವು ಯಾವುದಾದರೂ ತಿನಿಸುಗಳನ್ನ ತಯಾರಿಸೋದ್ರಲ್ಲಿ ಫೇಮಸ್ ಇದ್ದೀರಾ ಅಂದರೆ ಮನೆಗೆ ಅತಿಥಿಗಳು ಬಂದಾಗ ಆ ಖಾದ್ಯ ಖಾಯಂ ಸ್ಥಾನವನ್ನ ಪಡೆಯೋದ್ರಲ್ಲಿ ಎರಡು ಮಾತಿಲ್ಲ. ಆದರೆ ಇಲ್ಲೊಬ್ಬ ಮಹಿಳೆ ತಾನು ಅತ್ಯಂತ ಚೆನ್ನಾಗಿ ತಯಾರಿಸುವ ಮಿಠಾಯಿ ಮೇಲೆ ಎಷ್ಟು ಪ್ರೀತಿಯನ್ನ ಹೊಂದಿದ್ದಳು ಅಂದರೆ ಇದೀಗ ಆಕೆಯ ಮರಣಾನಂತರ ಸಮಾಧಿಯ ಮೇಲೆ ಮಿಠಾಯಿ ಮಾಡುವ ವಿಧಾನವನ್ನ ಕೆತ್ತಲಾಗಿದೆ.
ಕತ್ರೈನ್ ಆಂಡ್ರಿವ್ಸ್ ಎಂಬಾಕೆಯನ್ನು ಆಕೆ ಪತಿಯ ಸಮಾಧಿಯ ಜೊತೆಯಲ್ಲಿ ಹೂಳಲಾಗಿದ್ದು ಉತಾಹ್ದ ಈ ಮಹಿಳೆಯ ಸಮಾಧಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈಕೆಯ ಸಮಾಧಿಯ ಮೇಲೆ ಜನನ ಹಾಗೂ ಮರಣದ ದಿನಾಂಕದ ಜೊತೆಯಲ್ಲಿ ಇನ್ನೂ ಕೆಲ ವಿಶೇಷ ಬರಹವನ್ನ ಬರೆಯಲಾಗಿದೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿದ ಆಂಡ್ರಿವ್ಸ್ ಪುತ್ರಿ ಜ್ಯಾನಿಸ್ ಜಾನ್ಸನ್ ಜನರನ್ನ ತುಂಬಾ ಹಚ್ಚಿಕೊಳ್ತಿದ್ದ ನನ್ನ ತಾಯಿ ಮನೆಗೆ ಯಾರೇ ಬಂದರೂ ಸಹ ಅವರಿಗೆ ಈ ಮಿಠಾಯಿಯನ್ನ ತಯಾರಿಸಿ ನೀಡುತ್ತಿದ್ದಳು. ವೇಡ್ ಎಂಬವರನ್ನ ಪ್ರೀತಿಸಿದ್ದ ಆಂಡ್ರಿವ್ಸ್ 1944 ಡಿಸೆಂಬರ್ 18ರಲ್ಲಿ 2ನೇ ವಿಶ್ವಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಳು.
ವೇಡ್ ಅಮೆರಿಕದ ವಾಯುನೆಲೆಯ ಕ್ಯಾಪ್ಟನ್ ಆಗಿದ್ದರು. 2000ದಲ್ಲಿ ವೇಡ್ ನಿಧನರಾದ್ರು. ಈ ವೇಳೆಯಲ್ಲಿ ಸಮಾಧಿಗೆ ಹಾಕಬಹುದಾದ ಪತಿಯ ಫೋಟೋಗಳನ್ನ ಈಕೆಯೇ ಆಯ್ಕೆ ಮಾಡಿದ್ರು.
2019ರಲ್ಲಿ ಆಂಡ್ರಿವ್ ಕೂಡ ಸಾವನ್ನಪ್ಪಿದ್ದು ಆಕೆಯ ಸಮಾಧಿ ಮೇಲೆ ಚಾಕಲೇಟ್ ಮಿಠಾಯಿ ಮಾಡುವ ವಿಧಾನ ಬರೆಯಲಾಗಿದೆ. ಮೊದಲು ಇದರಲ್ಲಿ 1 ಟೇಬಲ್ ಸ್ಪೂನ್ ವೆನಿಲ್ಲಾ ಎಂದು ಬರೆಯಲಾಗಿತ್ತು. ಅದನ್ನೀಗ ಸರಿಪಡಿಸಿ ಒಂದು ಟೀ ಸ್ಪೂನ್ ವೆನಿಲ್ಲಾ ಎಂದು ಬರೆಯಲಾಗಿದೆ. ಈ ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.