alex Certify ಪತ್ನಿಯನ್ನು ರಕ್ಷಿಸಲು ಪತಿಯಿಂದ ಶಾರ್ಕ್‌ ಗೆ ಪಂಚ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿಯನ್ನು ರಕ್ಷಿಸಲು ಪತಿಯಿಂದ ಶಾರ್ಕ್‌ ಗೆ ಪಂಚ್…!

ಮಹಿಳೆಯೊಬ್ಬರನ್ನು ವೈಟ್‌ ಶಾರ್ಕ್‌ ಹಿಡಿದುಕೊಂಡಿದ್ದನ್ನು ತಪ್ಪಿಸಲು ಆಕೆಯ ಪತಿ ಹಿರೋಯಿಸಂ ತೋರಿಸಿದ್ದು, ಇದೀಗ ಭಾರಿ ಸದ್ದು ಮಾಡಿದೆ.

ಹೌದು, ಭಾನುವಾರ ಪೋರ್ಟ್‌ ಮ್ಯಾಕ್ವೈರಿ ಎನ್ನುವ ಪ್ರದೇಶದಲ್ಲಿ ಪತಿ-ಪತ್ನಿ ಇದ್ದರು. ಆದರೆ ಈ ವೇಳೆ ಪತ್ನಿ ಛಾಂಟೆಲ್ಲೆ ಡೋಲೈಯ ತೊಡೆಯನ್ನು ಶಾರ್ಕ್ ಹಿಡಿದುಕೊಂಡಿದೆ. ಆದರೆ ಕೂಡಲೇ ಸ್ಥಳದಲ್ಲಿದ್ದ ಪತಿ ಪತ್ನಿಯ ಸಹಾಯಕ್ಕೆ ಬಂದಿದ್ದಾನೆ. ಶಾರ್ಕ್ ಪತ್ನಿಯ ಕಾಲನ್ನು ಬಿಡುವ ತನಕ ಮೊಸಳೆಗೆ ನಿರಂತರವಾಗಿ ಹೊಡೆದಿದ್ದಾನೆ. ಅಂತಿಮವಾಗಿ ಶಾರ್ಕ್ ಮಹಿಳೆಯ ಕಾಲನ್ನು ಬಿಟ್ಟ ಬಳಿಕ ಇಬ್ಬರಿಗೂ ನೆಮ್ಮದಿ ಸಿಕ್ಕಿದೆ.

ಆದರೆ ಶಾರ್ಕ್ ಬಾಯಿ ಹಾಕಿದ್ದರಿಂದ, ಡೋಲೈ ಅವರ ಕಾಲಿಗೆ ಭಾರಿ ಪ್ರಮಾಣದ ಗಾಯವಾಗಿತ್ತು. ಕೂಡಲೇ ತುರ್ತು ನಂಬರ್‌ಗೆ ಕರೆ ಮಾಡಿ ಆಂಬ್ಯುಲೆನ್ಸ್‌ ಕರೆಸಲಾಗಿದೆ. ಇದೀಗ ಆಕೆ ಆಸ್ಪತ್ರೆಯಲ್ಲಿದ್ದು ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ವೈದ್ಯರು ಹೇಳಿದ್ದಾರೆ. ಘಟನೆ ಬಗ್ಗೆ ಸ್ಥಳದಲ್ಲಿದ್ದ ಝೆಡ್‌ ತೂಹಿ ಮಾತನಾಡಿದ್ದು, ಆಕೆ ಬೀಚ್‌ನಲ್ಲಿದ್ದಾಗ ಶಾರ್ಕ್ ಆಕೆಯ ಕಾಲನ್ನುಹಿಡಿದಿರುವುದು ಕಾಣಿಸಿತು. ಕೂಡಲೇ ಆಕೆ ಕಿರುಚಲು ಶುರು ಮಾಡಿದಳು. ಈ ವೇಳೆ ಆಕೆಯ ಪತಿ ಆಕೆಯ ನೆರವಿಗೆ ಧಾವಿಸಿದ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...