ಸಾರ್ವಜನಿಕ ಸ್ಥಳಗಳಲ್ಲಿ ಎಂದಾದರೂ ನಿಮ್ಮ ಲ್ಯಾಪ್ಟಾಪ್ನ್ನು ಮರೆತು ತೆರಳಿದ್ದೀರಾ..? ಒಂದು ವೇಳೆ ಮರೆತೆವು ಅಂದರೂ ಸಹ ಅದು ವಾಪಾಸ್ ಸಿಗೋದು ಭಾರೀ ಕಷ್ಟ. ಮೆಟ್ರೋದಲ್ಲಿ ಲ್ಯಾಪ್ಟಾಪ್ ಮರೆತು ಬಿಟ್ಟುಬಂದಿದ್ದ ಮಹಿಳೆಗೆ ಅಪರಿಚಿತ ಅದನ್ನ ಹಿಂದಿರುಗಿಸಿದ ಘಟನೆ ಬ್ರಿಟನ್ನಲ್ಲಿ ವರದಿಯಾಗಿದೆ.
ಡೈಸಿ ಮೋರಿಸ್ ಎಂಬಾಕೆ ಹೇಗೆ ಅಪರಿಚಿತ ವ್ಯಕ್ತಿ ಸೋಶಿಯಲ್ ಮೀಡಿಯಾದ ಸಹಾಯದಿಂದ ತನ್ನನ್ನ ಹುಡುಕಿದ ಅನ್ನೋದನ್ನ ಲಿಂಕ್ಡಿನ್ನಲ್ಲಿ ಶೇರ್ ಮಾಡಿದ್ದಾಳೆ.
ಮಹಿಳೆಯ ಸಂಪೂರ್ಣ ಉದ್ಯಮದ ಮಾಹಿತಿಯು ಲ್ಯಾಪ್ಟಾಪ್ನಲ್ಲೇ ಇತ್ತು. ಹೀಗಾಗಿ ಆಕೆ ಕೂಡಲೇ ಟ್ರೇನ್ ನಿರ್ವಾಹಕನ ಬಳಿಗೆ ಹೋಗಿ ಲ್ಯಾಪ್ಟಾಪ್ ಬಗ್ಗೆ ವಿಚಾರಿಸಿದ್ದಳು. ಆದರೆ ಕಂಡಕ್ಟರ್ ಇದಕ್ಕೆ 7 ದಿನಗಳ ಸಮಯಾವಕಾಶ ಬೇಕು ಎಂದು ಕೇಳಿದ್ದರಂತೆ.
ಉದ್ಯಮವನ್ನ ಮುಂದುವರಿಸೋಕೆ ಲ್ಯಾಪ್ಟಾಪ್ ಅಗತ್ಯವಾಗಿ ಬೇಕಿದ್ದರಿಂದ ಮಹಿಳೆ ಹೊಸ ಲ್ಯಾಪ್ ಟಾಪ್ ಖರೀದಿ ಮಾಡಲು ನಿರ್ಧರಿಸಿದ್ರು. ಈ ವೇಳೆ ಆಕೆಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದೆ.
ಆದರೆ ಲ್ಯಾಪ್ಟಾಪ್ ಹಿಂದಿರುಗಿಸಿದ ವ್ಯಕ್ತಿ ಡೈಸಿಯಿಂದ ಯಾವುದೇ ಹಣವನ್ನ ಸ್ವೀಕರಿಸಲು ನಿರಾಕರಿಸಿದ್ದಾನೆ. ಹೀಗಾಗಿ ಆಕೆ ಆತನಿಗೆ ಕೊಡಬೇಕು ಎಂದುಕೊಂಡಿದ್ದ ಹಣವನ್ನ ಚಾರಿಟಿಯೊಂದಕ್ಕೆ ನೀಡಿದ್ದಾಳೆ.