alex Certify ಸುಂದರ ಪುರುಷನ ಹುಡುಕಾಟದಲ್ಲಿ ಲಾಕ್​ಡೌನ್​ ನಿಯಮ ಉಲ್ಲಂಘಿಸಿದ ಮಹಿಳೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಂದರ ಪುರುಷನ ಹುಡುಕಾಟದಲ್ಲಿ ಲಾಕ್​ಡೌನ್​ ನಿಯಮ ಉಲ್ಲಂಘಿಸಿದ ಮಹಿಳೆ..!

ಕೊರೊನಾ ವೈರಸ್​​ನಿಂದಾಗಿ ಕಳೆದ ವರ್ಷವಂತೂ ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳು ಲಾಕ್​ಡೌನ್​ ಆಗಿದ್ದವು. ಅಗತ್ಯ ಕಾರ್ಯದ ಹೊರತು ಮನೆಯಿಂದ ಹೊರಬರಲು ಯಾರಿಗೂ ಅನುಮತಿ ಇರಲಿಲ್ಲ.

ಆದರೆ ಲಾಕ್​ಡೌನ್​ ನಿಯಮ ಉಲ್ಲಂಘಿಸಿದ ಮಹಿಳೆಯೊಬ್ಬರು ತಾವು ಮನೆಯಿಂದ ಹೊರಬರೋಕೆ ನಿಜವಾದ ಕಾರಣ ಏನಿತ್ತು ಅನ್ನೋದನ್ನ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದು ಈ ಕಾರಣ ಕೇಳಿದ ಪೊಲೀಸರು ಶಾಕ್​ ಆಗಿದ್ದಾರೆ.

ಇಂಗ್ಲೆಂಡ್​ನ ವಲ್ಲಾಸಿಯ ರಾಂಕಿನ್​ ಸ್ಟ್ರೀಟ್​ನಲ್ಲಿ ಕಳೆದ ವರ್ಷ ಮೇ ತಿಂಗಳಲ್ಲಿ ಓಡಾಡುತ್ತಿದ್ದ 29 ವರ್ಷದ ಲೂಯಿಸ್​​ ವ್ಹೇಲನ್​ ಎಂಬವರನ್ನ ಪೊಲೀಸರು ತಡೆದಿದ್ದರು. ಈ ವೇಳೆ ಇಂಗ್ಲೆಂಡ್​ನಲ್ಲಿ ಮೊದಲ ಲಾಕ್​ಡೌನ್​ ಜಾರಿಯಲ್ಲಿತ್ತು.

ಪೊಲೀಸರು ಕೇಳಿದ ವೇಳೆ ಲೂಯಿಸ್​ ಮೊದಲು ತಾನು ಕೆಲ ಅಂಗಡಿಗಳಿಗೆ ಭೇಟಿ ನೀಡಿ ಇದೀಗ ತಮ್ಮ ಸೋದರನ ಮಗಳನ್ನ ಡ್ರಾಪ್​ ಮಾಡ್ತಿರೋದಾಗಿ ಹೇಳಿಕೊಂಡಿದ್ದಳು. ಆದರೆ ಪೊಲೀಸ್​ ಅಧಿಕಾರಿ ಪಿ.ಸಿ. ಡೇವಿಡ್​ ಲೂಯಿಸ್​ಗೆ ಹೆಚ್ಚಿನ ವಿಚಾರಣೆ ನಡೆಸಿದ್ದು ಈ ವೇಳೆ ಆಕೆ ತಾನು ಸುಂದರ ಪುರುಷನ ಹುಡುಕಾಟದಲ್ಲಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾಳೆ.

ಈ ಸಂಬಂಧ ವಿಚಾರಣೆ ನಡೆಸಲಾಗಿದ್ದು ಮಹಿಳೆಗೆ ಲಾಕ್​ಡೌನ್​ ನಿಯಮ ಉಲ್ಲಂಘಿಸಿದ್ದಕ್ಕೆ 22,700 ರೂ., ಹೆಚ್ಚುವರಿ ಶುಲ್ಕ 8700 ರೂಪಾಯಿ ಹಾಗೂ 3500 ರೂಪಾಯಿ ಸೇರಿದಂತೆ ಒಟ್ಟು 35,000 ರೂಪಾಯಿಗಳನ್ನ ದಂಡದ ರೂಪದಲ್ಲಿ ಪಡೆಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...