ಕೊರೊನಾ ವೈರಸ್ನಿಂದಾಗಿ ಕಳೆದ ವರ್ಷವಂತೂ ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳು ಲಾಕ್ಡೌನ್ ಆಗಿದ್ದವು. ಅಗತ್ಯ ಕಾರ್ಯದ ಹೊರತು ಮನೆಯಿಂದ ಹೊರಬರಲು ಯಾರಿಗೂ ಅನುಮತಿ ಇರಲಿಲ್ಲ.
ಆದರೆ ಲಾಕ್ಡೌನ್ ನಿಯಮ ಉಲ್ಲಂಘಿಸಿದ ಮಹಿಳೆಯೊಬ್ಬರು ತಾವು ಮನೆಯಿಂದ ಹೊರಬರೋಕೆ ನಿಜವಾದ ಕಾರಣ ಏನಿತ್ತು ಅನ್ನೋದನ್ನ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದು ಈ ಕಾರಣ ಕೇಳಿದ ಪೊಲೀಸರು ಶಾಕ್ ಆಗಿದ್ದಾರೆ.
ಇಂಗ್ಲೆಂಡ್ನ ವಲ್ಲಾಸಿಯ ರಾಂಕಿನ್ ಸ್ಟ್ರೀಟ್ನಲ್ಲಿ ಕಳೆದ ವರ್ಷ ಮೇ ತಿಂಗಳಲ್ಲಿ ಓಡಾಡುತ್ತಿದ್ದ 29 ವರ್ಷದ ಲೂಯಿಸ್ ವ್ಹೇಲನ್ ಎಂಬವರನ್ನ ಪೊಲೀಸರು ತಡೆದಿದ್ದರು. ಈ ವೇಳೆ ಇಂಗ್ಲೆಂಡ್ನಲ್ಲಿ ಮೊದಲ ಲಾಕ್ಡೌನ್ ಜಾರಿಯಲ್ಲಿತ್ತು.
ಪೊಲೀಸರು ಕೇಳಿದ ವೇಳೆ ಲೂಯಿಸ್ ಮೊದಲು ತಾನು ಕೆಲ ಅಂಗಡಿಗಳಿಗೆ ಭೇಟಿ ನೀಡಿ ಇದೀಗ ತಮ್ಮ ಸೋದರನ ಮಗಳನ್ನ ಡ್ರಾಪ್ ಮಾಡ್ತಿರೋದಾಗಿ ಹೇಳಿಕೊಂಡಿದ್ದಳು. ಆದರೆ ಪೊಲೀಸ್ ಅಧಿಕಾರಿ ಪಿ.ಸಿ. ಡೇವಿಡ್ ಲೂಯಿಸ್ಗೆ ಹೆಚ್ಚಿನ ವಿಚಾರಣೆ ನಡೆಸಿದ್ದು ಈ ವೇಳೆ ಆಕೆ ತಾನು ಸುಂದರ ಪುರುಷನ ಹುಡುಕಾಟದಲ್ಲಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾಳೆ.
ಈ ಸಂಬಂಧ ವಿಚಾರಣೆ ನಡೆಸಲಾಗಿದ್ದು ಮಹಿಳೆಗೆ ಲಾಕ್ಡೌನ್ ನಿಯಮ ಉಲ್ಲಂಘಿಸಿದ್ದಕ್ಕೆ 22,700 ರೂ., ಹೆಚ್ಚುವರಿ ಶುಲ್ಕ 8700 ರೂಪಾಯಿ ಹಾಗೂ 3500 ರೂಪಾಯಿ ಸೇರಿದಂತೆ ಒಟ್ಟು 35,000 ರೂಪಾಯಿಗಳನ್ನ ದಂಡದ ರೂಪದಲ್ಲಿ ಪಡೆಯಲಾಗಿದೆ.