alex Certify ಸ್ನಾನಗೃಹದ ಹಿಂದಿದ್ದ ದೊಡ್ಡ ರಹಸ್ಯ ಭೇದಿಸಿದ ಮಹಿಳೆ…! ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ನಾನಗೃಹದ ಹಿಂದಿದ್ದ ದೊಡ್ಡ ರಹಸ್ಯ ಭೇದಿಸಿದ ಮಹಿಳೆ…! ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದ ವಿಡಿಯೋ

ನ್ಯೂಯಾರ್ಕ್​ನ ಮಹಿಳೆಯೊಬ್ಬರು ತನ್ನ ಮನೆಯ ಒಳಗೆ ಒಂದು ಆಶ್ಚರ್ಯಕರ ಅನ್ವೇಷಣೆಯನ್ನ ಮಾಡಿದ್ದಾರೆ. ಆಕೆಯ ಮನೆಯ ಸ್ನಾನಗೃಹದ ಕನ್ನಡಿಯ ಹಿಂದಿನಿಂದ ಆಕೆ ಸಂಪೂರ್ಣ ಅಪಾರ್ಟ್​ಮೆಂಟ್​ ಒಂದನ್ನ ಕಂಡು ಹಿಡಿದಿದ್ದಾರೆ. ತನ್ನ ಈ ಅನ್ವೇಷಣೆಯನ್ನ ಸಮಂತಾ ಹಾರ್ಟ್ಸೋ ಸರಣಿ ಸರಣಿಯಾಗಿ ಟಿಕ್​ ಟಾಕ್​ನಲ್ಲಿ ಶೇರ್​ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಸ್ನಾನಗೃಹದಲ್ಲಿ ಯಾವಾಗಲು ತಂಪಾದ ಗಾಳಿ ಬರ್ತಿದ್ದನ್ನ ಕಂಡು ಗೊಂದಲಕ್ಕೊಳಗಾದ ಸಮಂತಾ ಈ ಅನ್ವೇಷಣೆ ಮಾಡಿದ್ದಾಳೆ. ಯಾವುದೇ ಕಿಟಕಿ ಇಲ್ಲದೆಯೂ ಗಾಳಿ ಹೇಗೆ ಬರೋಕೆ ಸಾಧ್ಯ ಎಂದು ಚಿಂತಿಸಿದ ಸಮಂತಾ ಈ ವಿಚಾರವನ್ನ ಕಂಡು ಹಿಡಿದಿದ್ದಾರೆ.

ಟಿಕ್​ಟಾಕ್​ನಲ್ಲಿ 7 ಮಿಲಿಯನ್​ ವೀವ್ಸ್ ಸಂಪಾದಿಸಿರುವ ಈ ವಿಡಿಯೋದಲ್ಲಿ ಗಾಳಿಗೆ ಆಕೆಯ ತಲೆಗೂದಲು ಅಲ್ಲಾಡುತ್ತಿರೋದನ್ನ ನೀವು ಕಾಣಬಹುದಾಗಿದೆ. ಆಕೆಗೆ ಇದು ಕನ್ನಡಿಯ ಹಿಂಬದಿಯಿಂದ ಬರುವ ಗಾಳಿ ಎಂದು ಬಳಿಕ ತಿಳಿದಿದೆ.

ಈ ಕನ್ನಡಿಯನ್ನ ತೆಗೆದ ಬಳಿಕ ಒಂದು ರಂಧ್ರ ಕಾಣಿಸಿದೆ. ರಂಧ್ರದಿಂದಾಚೆ ಒಂದು ಕತ್ತಲು ಕೋಣೆ ಇತ್ತು. ನನಗೆ ಈ ವಿಚಾರದಲ್ಲಿ ಸ್ಪಷ್ಟತೆ ಬೇಕು ಎಂದು ವಿಡಿಯೋದಲ್ಲಿ ಹೇಳುವ ಸಮಂತಾ ಮಾಸ್ಕ್​ ಹಾಗೂ ಗ್ಲೌಸ್​ ಧರಿಸಿ ಕೈಯಲ್ಲಿ ಸುತ್ತಿಗೆಯನ್ನ ಹಿಡಿದು ಆ ಕೋಣೆಗೆ ಹಾರಿದ ಬಳಿಕ ಅದೊಂದು ಪ್ರತ್ಯೇಕ ಅಪಾರ್ಟ್​ಮೆಂಟ್​ ಎಂಬ ವಿಚಾರ ತಿಳಿದು ಬಂದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲಿ ವ್ಯಾಪಕವಾಗಿ ಶೇರ್​ ಆಗ್ತಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...