ನ್ಯೂಯಾರ್ಕ್ನ ಮಹಿಳೆಯೊಬ್ಬರು ತನ್ನ ಮನೆಯ ಒಳಗೆ ಒಂದು ಆಶ್ಚರ್ಯಕರ ಅನ್ವೇಷಣೆಯನ್ನ ಮಾಡಿದ್ದಾರೆ. ಆಕೆಯ ಮನೆಯ ಸ್ನಾನಗೃಹದ ಕನ್ನಡಿಯ ಹಿಂದಿನಿಂದ ಆಕೆ ಸಂಪೂರ್ಣ ಅಪಾರ್ಟ್ಮೆಂಟ್ ಒಂದನ್ನ ಕಂಡು ಹಿಡಿದಿದ್ದಾರೆ. ತನ್ನ ಈ ಅನ್ವೇಷಣೆಯನ್ನ ಸಮಂತಾ ಹಾರ್ಟ್ಸೋ ಸರಣಿ ಸರಣಿಯಾಗಿ ಟಿಕ್ ಟಾಕ್ನಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸ್ನಾನಗೃಹದಲ್ಲಿ ಯಾವಾಗಲು ತಂಪಾದ ಗಾಳಿ ಬರ್ತಿದ್ದನ್ನ ಕಂಡು ಗೊಂದಲಕ್ಕೊಳಗಾದ ಸಮಂತಾ ಈ ಅನ್ವೇಷಣೆ ಮಾಡಿದ್ದಾಳೆ. ಯಾವುದೇ ಕಿಟಕಿ ಇಲ್ಲದೆಯೂ ಗಾಳಿ ಹೇಗೆ ಬರೋಕೆ ಸಾಧ್ಯ ಎಂದು ಚಿಂತಿಸಿದ ಸಮಂತಾ ಈ ವಿಚಾರವನ್ನ ಕಂಡು ಹಿಡಿದಿದ್ದಾರೆ.
ಟಿಕ್ಟಾಕ್ನಲ್ಲಿ 7 ಮಿಲಿಯನ್ ವೀವ್ಸ್ ಸಂಪಾದಿಸಿರುವ ಈ ವಿಡಿಯೋದಲ್ಲಿ ಗಾಳಿಗೆ ಆಕೆಯ ತಲೆಗೂದಲು ಅಲ್ಲಾಡುತ್ತಿರೋದನ್ನ ನೀವು ಕಾಣಬಹುದಾಗಿದೆ. ಆಕೆಗೆ ಇದು ಕನ್ನಡಿಯ ಹಿಂಬದಿಯಿಂದ ಬರುವ ಗಾಳಿ ಎಂದು ಬಳಿಕ ತಿಳಿದಿದೆ.
ಈ ಕನ್ನಡಿಯನ್ನ ತೆಗೆದ ಬಳಿಕ ಒಂದು ರಂಧ್ರ ಕಾಣಿಸಿದೆ. ರಂಧ್ರದಿಂದಾಚೆ ಒಂದು ಕತ್ತಲು ಕೋಣೆ ಇತ್ತು. ನನಗೆ ಈ ವಿಚಾರದಲ್ಲಿ ಸ್ಪಷ್ಟತೆ ಬೇಕು ಎಂದು ವಿಡಿಯೋದಲ್ಲಿ ಹೇಳುವ ಸಮಂತಾ ಮಾಸ್ಕ್ ಹಾಗೂ ಗ್ಲೌಸ್ ಧರಿಸಿ ಕೈಯಲ್ಲಿ ಸುತ್ತಿಗೆಯನ್ನ ಹಿಡಿದು ಆ ಕೋಣೆಗೆ ಹಾರಿದ ಬಳಿಕ ಅದೊಂದು ಪ್ರತ್ಯೇಕ ಅಪಾರ್ಟ್ಮೆಂಟ್ ಎಂಬ ವಿಚಾರ ತಿಳಿದು ಬಂದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲಿ ವ್ಯಾಪಕವಾಗಿ ಶೇರ್ ಆಗ್ತಿದೆ.
https://youtu.be/6kJ6TtC5ObE?t=91