ಇಂಗ್ಲೆಂಡ್ನ ಬ್ರಿಸ್ಟೋಲ್ ಪಟ್ಟಣದಲ್ಲಿ ಮನೆಯ ಮಾರಾಟಕ್ಕೆ ನಿರ್ಧರಿಸಿದ್ದ ಮಹಿಳೆ ತನ್ನ ಮನೆಯ ಗೋಡೆಯಲ್ಲಿ ರಾತ್ರೋರಾತ್ರಿ ಬ್ಯಾಂಕ್ಸಿ ಆರ್ಟ್ ಮೂಡುತ್ತಿದ್ದಂತಯೇ ತನ್ನ ನಿರ್ಧಾರವನ್ನ ಬದಲಿಸಿದ್ದಾಳೆ.
ಏಲಿಯನ್ ಮಕೀನ್ ಎಂಬ ಮಹಿಳೆ ತನ್ನ ಮನೆಯನ್ನ 3 ಕೋಟಿ ರೂಪಾಯಿಗೆ ಮಾರಾಟ ಮಾಡಲು ತಯಾರಿ ನಡೆಸಿದ್ದಳು. ಆದರೆ ರಾತ್ರೋ ರಾತ್ರಿ ಆಕೆಯ ಮನೆ ಮೇಲೆ ವೃದ್ಧೆಯೊಬ್ಬಳು ಸೀನುತ್ತಿರುವ ರೀತಿಯಲ್ಲಿ ಬ್ಯಾಂಕ್ಸಿ ಚಿತ್ರವನ್ನ ಮೂಡಿಸಲಾಗಿತ್ತು. ಈ ಅದ್ಭುತ ಚಿತ್ರವನ್ನ ನೋಡುತ್ತಿದ್ದಂತೆಯೇ ಆಕೆ ತನ್ನ ಮನೆಯ ಬೆಲೆಯನ್ನ 17 ಪಟ್ಟು ಏರಿಕೆ ಮಾಡಿದ್ದಾಳೆ ಎನ್ನಲಾಗಿದೆ.
ಹೆಸರಾಂತ ಬ್ಯಾಂಕ್ಸಿ ಕಲೆಗಾರ ಇದನ್ನ ತಾನೇ ಚಿತ್ರಿಸಿದ್ದು ಎಂದು ಒಪ್ಪಿಕೊಂಡಿದ್ದು ಇನ್ಸ್ಟಾಗ್ರಾಂನಲ್ಲಿ ಈ ಫೋಟೋ ಶೇರ್ ಮಾಡಿದ್ದಾನೆ. ಹಾಗೂ ಇದಕ್ಕೆ ಆಚೂ..! ಎಂದು ಕ್ಯಾಪ್ಶನ್ ನೀಡಿದ್ದಾನೆ.
ಚಿತ್ರದಲ್ಲಿ ಬಾಗು ಬೆನ್ನಿನ ವೃದ್ಧೆ ಬಿಳ್ಳಿ ಬಣ್ಣದ ಸ್ಕಾರ್ಫ್ನ್ನ ತಲೆಗೆ ಕಟ್ಟಿದ್ದಾಳೆ ಹಾಗೂ ಕಂದು ಬಣ್ಣದ ಕೋಟ್ನ್ನ ಧರಿಸಿದ್ದಾಳೆ. ಕೈಯಲ್ಲಿ ಕರ್ಚೀಫ್ ಹಿಡಿದ ವೃದ್ಧೆ ಸೀನುತ್ತಿದ್ದು ಆಕೆಯ ಬ್ಯಾಗ್ ಹಾಗೂ ಊರುಗೋಲು ಕೈಯಿಂದ ಜಾರಿ ಬೀಳುತ್ತಿರುವ ರೀತಿಯಲ್ಲಿ ಗೋಡೆ ಬರಹವನ್ನ ಬಿಡಿಸಲಾಗಿದೆ.
ಏಲಿಯನ್ ಆಸ್ತಿ ಇಂಗ್ಲೆಂಡ್ ದುಬಾರಿ ಏರಿಯಾಗಳಲ್ಲೊಂದಾದ ವೇಲ್ ಸ್ಟ್ರೀಟ್ನಲ್ಲಿದೆ. ಈ ಗೋಡೆ ಬರಹದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ ಮನೆಗೆ ಭೇಟಿ ನೀಡುವವರ ಸಂಖ್ಯೆ ಜಾಸ್ತಿಯಾಗಿದೆಯಂತೆ. ಹೀಗಾಗಿ ಆಕೆ ತನ್ನ ಮನೆಯ ಮೌಲ್ಯವನ್ನ ಹೆಚ್ಚಿಸಲು ನಿರ್ಧರಿಸಿದ್ದಾಳೆ.
https://www.instagram.com/p/CIn6guyMPeS/?utm_source=ig_web_copy_link