alex Certify 9 ವಾರಗಳ ಹಿಂದೆ ಕಚೇರಿಯಲ್ಲಿ ಬಿಟ್ಟುಬಂದಿದ್ದ ಬಾಳೆಹಣ್ಣಿಗಾಗಿ ಪರಿತಪಿಸಿದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

9 ವಾರಗಳ ಹಿಂದೆ ಕಚೇರಿಯಲ್ಲಿ ಬಿಟ್ಟುಬಂದಿದ್ದ ಬಾಳೆಹಣ್ಣಿಗಾಗಿ ಪರಿತಪಿಸಿದ ಮಹಿಳೆ

ಲಂಡನ್: ಲಾಕ್ ಡೌನ್ ಗೂ ಮೊದಲು ಆಫೀಸ್ ನಲ್ಲಿ ಬಿಟ್ಟು ಬಂದ ವಸ್ತುಗಳಿಗೆ ಹಲವರು ಚಿಂತಿಸುತ್ತಿರಬಹುದು. ಇಲ್ಲೊಬ್ಬ ಮಹಿಳೆ ಆಫೀಸ್ ನಲ್ಲಿ ಬಿಟ್ಟಿದ್ದ ಒಂದು ಬಾಳೆಹಣ್ಣಿಗೆ ತಲೆಬಿಸಿ ಮಾಡಿಕೊಂಡಿದ್ದಾಳೆ.

ಯುಕೆಯ ಗ್ಲಾಸ್ಕೊವ್ ಎಂಬ ಪ್ರದೇಶದ ಮಹಿರಿ ಲೂಯಿಸ್ ಬ್ರೆನ್ನನ್ ಎನ್ನುವ ಮಹಿಳೆ ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ಆಫೀಸ್ ಡ್ರಾವರ್ ಅಲ್ಲಿ ಒಂದು ಬಾಳೆಹಣ್ಣು ಉಳಿದುಹೋಗಿರುವುದು ನೆನಪಿಗೆ ಬಂದಿದ್ದು, ನನಗೆ ಆಫೀಸ್ ನಲ್ಲಿ ಉಳಿದುಹೋದ ಬಾಳೆಹಣ್ಣಿನಿಂದಾಗಿ ಆತಂಕವಾಗುತ್ತಿದೆ ಎಂದು ಮೇ 12 ರಂದು ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರು.

ನಂತರ ಅವರು ಆಫೀಸ್ ಗೆ ಹೋಗಿ ತಮ್ಮ ಡ್ರಾವರ್ ಅನ್ನು ತೆಗೆದು ನೋಡುವ ವಿಡಿಯೋ ಮಾಡಿದ್ದಾರೆ. “ತುಂಬಾ ಆತಂಕವಾದ್ದರಿಂದ ಆಫೀಸ್ ಗೆ ಬಂದು ನೋಡಿದೆ. ಇಲ್ಲಿದೆ ನೋಡಿ 9 ವಾರದ ಬಾಳೆಹಣ್ಣು” ಹೇಗಿದೆ ನೋಡಿ ಎಂದು ಮತ್ತೊಮ್ಮೆ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಎಲ್ಲಿ ಬಾಳೆಹಣ್ಣು ಕೊಳೆತು ಹುಳುಗಳು ಆಗಿರಬಹುದು ಎಂದು ಅವರು ಆತಂಕಗೊಡಿದ್ದರು.

ನೀವು ಒಂದು ಬಾಳೆಹಣ್ಣಿಗೆ ಆಫೀಸ್ ಗೆ ಹೋದಿರಿ ಎಂದು ನಂಬಲು ಆಗುತ್ತಿಲ್ಲ ಎಂದು ಒಬ್ಬರು ಕಮೆಂಟ್ ಮಾಡಿದರೆ, ಇನ್ನೂ ಹಲವರು ತಾವು ಬಿಟ್ಟುಬಂದ ವಸ್ತುಗಳ ಬಗ್ಗೆ ಚಿಂತೆ ಕಾಡುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...