alex Certify ಆಸ್ಪತ್ರೆಯಲ್ಲಿರುವ ಮಕ್ಕಳಿಗಾಗಿ ಜೀವವನ್ನೇ ಪಣಕ್ಕಿಟ್ಟ ಮಹಿಳೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ಪತ್ರೆಯಲ್ಲಿರುವ ಮಕ್ಕಳಿಗಾಗಿ ಜೀವವನ್ನೇ ಪಣಕ್ಕಿಟ್ಟ ಮಹಿಳೆ..!

ಇಟಲಿಯ ಸಣ್ಣ ಪಟ್ಟಣವಾದ ಟರಂಟೋದಲ್ಲಿ ಮಹಿಳೆಯೊಬ್ಬರು ಮಾಟಗಾತಿಯ ರೀತಿಯಲ್ಲಿ ಉಡುಗೆಯನ್ನ ತೊಟ್ಟು ಆಸ್ಪತ್ರೆಯಲ್ಲಿದ್ದ ಮಕ್ಕಳನ್ನ ರಂಜಿಸಿದ್ದಾರೆ. ಎತ್ತರವಾದ ಕಟ್ಟಡದ ನಡುವೆ ಕಟ್ಟಲಾದ ವೈರ್​ ಹಿಡಿದು ಮಹಿಳೆ ಮಾಡುತ್ತಿರುವ ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಸ್ಯಾಂಟಿಸಿಮಾ ಅನುಂಜಿಯಾಟಾ ಆಸ್ಪತ್ರೆಯ ಮಕ್ಕಳ ವಾರ್ಡ್​ನಲ್ಲಿ ಬುಧವಾರ ಈ ಘಟನೆ ನಡೆದಿದೆ. ವಾರ್ಡ್​ನಲ್ಲಿರುವ ಮಕ್ಕಳಿಗೆ ಉಡುಗೊರೆ ನೀಡುವ ಸಲುವಾಗಿ ಮಾಟಗಾತಿ ವೇಷದಲ್ಲಿರುವ ಮಹಿಳೆ ಈ ಸಾಹಸವನ್ನ ಪ್ರದರ್ಶಿಸಿದ್ದಾರೆ.

ಸಾಮಾನ್ಯವಾಗಿ ಮಾಟಗಾತಿ ಅಂದರೆ ಖಳನಾಯಕಿ ಎಂಬ ಅಭಿಪ್ರಾಯ ಮೂಡಿಬಿಡುತ್ತೆ. ಆದರೆ ಈ ಮಹಿಳೆ ಮಾತ್ರ ಮಾಟಗಾತಿ ವೇಷದಲ್ಲಿ ಮಕ್ಕಳನ್ನ ಹೆದರಿಸದೇ ಮೆರುಗನ್ನ ನೀಡಿದ್ದಾರೆ.

ಅಂದಹಾಗೆ ಮಹಿಳೆ ಮಾಟಗಾತಿಯ ವೇಷವನ್ನೇ ಧರಿಸೋದ್ರ ಹಿಂದೆ ಬಲವಾದ ಕಾರಣವೂ ಇದೆ. ಇಲ್ಲಿನ ಜಾನಪದ ಕತೆಯೊಂದರ ಪ್ರಕಾರ ಬೆಫಾನಾ ಎಂಬ ಮಾಟಗಾತಿ ಜನವರಿ 5ರ ಮುನ್ನಾದಿನಂದು ಉಡುಗೊರೆಗಳನ್ನ ನೀಡುತ್ತಾಳೆ ಎಂದು ಹೇಳಲಾಗುತ್ತೆ. ಕ್ರಿಸ್​ಮಸ್​ನ ಸಾಂತಾಕ್ಲಾಸ್​ ರೀತಿಯಲ್ಲೇ ಎಪಿಫ್ಯಾನಿ ಡೇ ಆಚರಿಸಲಾಗುತ್ತೆ.

— Reuters (@Reuters) January 7, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...