ಕೋವಿಡ್ 19 ವೈರಸ್ ಇನ್ನೂ ಕೊನೆಗಾಣದ ಹಿನ್ನಲೆಯಲ್ಲಿ ಜನರಿಗೆ ಐಸೋಲೇಷನ್ ಹಾಗೂ ಕ್ವಾರಂಟೈನ್ನಿಂದ ಇನ್ನೂ ಮುಕ್ತಿ ಸಿಕ್ಕಿಲ್ಲ. ಇದರ ನಡುವೆಯೇ ಅನೇಕ ಮಂದಿ ಪ್ರವಾಸಕ್ಕೆ, ಪಾರ್ಟಿಗೆ ಹೋಗೋಕೆ ಆರಂಭಿಸಿದ್ದಾರೆ.ಆದರೆ ಇನ್ನೂ ಅನೇಕ ಮಂದಿ ಸಾಮಾಜಿಕ ಅಂತರವನ್ನ ಕಾಪಾಡಿಕೊಂಡು ಪ್ರವಾಸ ಹಾಗೂ ಪಾರ್ಟಿಯಿಂದ ದೂರ ಇದ್ದಾರೆ.
ರೆಡಿಟ್ನಲ್ಲಿ ಶೇರ್ ಮಾಡಲಾದ ಫೋಟೋವೊಂದರಲ್ಲಿ ಯುವತಿಯೊಬ್ಬರು ತಮ್ಮ ಹುಟ್ಟುಹಬ್ಬವನ್ನ ಬಹಳ ವಿಶೇಷವಾಗಿ ಆಚರಿಸಿರೋದನ್ನ ನೋಡಬಹುದಾಗಿದೆ. ಲಾಕ್ಡೌನ್ ಅವಧಿಯಲ್ಲೂ ಬರ್ತಡೇ ಪಾರ್ಟಿ ಮಾಡಬೇಕೆಂದುಕೊಂಡ ಈಕೆ ಬೇರೆಬೇರೆ ಪಾರ್ಟಿ ಡ್ರೆಸ್ಗಳನ್ನ ಧರಿಸಿ ವಿಭಿನ್ನ ಜಾಗದಲ್ಲಿ ನಿಂತು ಪೋಸ್ ನೀಡಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗಿದೆ.