ಅವಳಿ ಮಕ್ಕಳ ಗರ್ಭವತಿಯಾಗಿದ್ದ ಮಹಿಳೆಯೊಬ್ಬರು, ಕೆಲವೇ ದಿನಗಳ ಅಂತರದಲ್ಲಿ ಮೂರನೇ ಮಗುವಿಗೂ ಜನ್ಮ ನೀಡಲು ಸಜ್ಜಾಗಿದ್ದಾರೆ. ಈ ವಿಚಾರವನ್ನು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮುಖಾಂತರ ಖಾತ್ರಿ ಪಡಿಸಿಕೊಳ್ಳಲಾಗಿದೆ.
ಈ ತಾಯಿಯ ಮೊದಲ ಇಬ್ಬರು ಮಕ್ಕಳು ತಲಾ 10 & 11 ದಿನಗಳ ಅಂತರದಲ್ಲಿ ಮೂರನೇ ಮಗುವಿಗಿಂತ ದೊಡ್ಡವರಾಗಿದ್ದಾರೆ. ಇಂಥ ಪರಿಸ್ಥಿತಿಯನ್ನು ಸೂಪರ್‌ಫೆಟೇಷನ್ ಎನ್ನುತ್ತಾರೆ. ಮೊದಲು ಎರಡು ಮೊಟ್ಟೆಗಳು ಫಲವತ್ತಾದ ಬಳಿಕ ಮೂರನೇ ಮೊಟ್ಟೆಯು ಎರಡು ದಿನಗಳಿಂದ ವಾರಗಳ ಅಂತರದಲ್ಲಿ ಮೂರನೇ ಮೊಟ್ಟೆ ಫಲವತ್ತಾದ ಸಂದರ್ಭದಲ್ಲಿ ಹೀಗೆ ಆಗುತ್ತದೆ.
ಡೆಲಿವರಿ ದಿನಾಂಕವನ್ನು ಎದುರು ನೋಡುತ್ತಿರುವ ಈ ತಾಯಿ, ತಮ್ಮ ಅನುಭವಗಳನ್ನು ಟಿಕ್‌ಟಾಕ್ ವಿಡಿಯೋಗಳ ಮುಖಾಂತರ ಹಂಚಿಕೊಳ್ಳುತ್ತಿದ್ದಾರೆ.