alex Certify ಸಮುದ್ರ ದಂಡೆಯಲ್ಲಿ ಸಿಕ್ಕ ಪ್ಲಾಸ್ಟಿಕ್​ ತ್ಯಾಜ್ಯಗಳಿಂದಲೇ ಬದುಕು ಕಟ್ಟಿಕೊಂಡ ಮಹಿಳೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಮುದ್ರ ದಂಡೆಯಲ್ಲಿ ಸಿಕ್ಕ ಪ್ಲಾಸ್ಟಿಕ್​ ತ್ಯಾಜ್ಯಗಳಿಂದಲೇ ಬದುಕು ಕಟ್ಟಿಕೊಂಡ ಮಹಿಳೆ..!

ಕೋವಿಡ್​ 19 ನಿರ್ಬಂಧಗಳು ಹಾಗೂ ಲಾಕ್​ಡೌನ್​ನಿಂದಾಗಿ ಬಹುತೇಕ ಮಂದಿಗೆ ತಮ್ಮ ಕಲೆಯನ್ನ ಪ್ರದರ್ಶಿಸೋಕೆ ಉತ್ತಮ ವೇದಿಕೆ ಸಿಕ್ಕಂತಾಗಿದೆ. ಅಲ್ಲದೇ ಮನೆಯಲ್ಲೇ ಹಣ ಗಳಿಕೆ ಮಾಡೋದಕ್ಕೂ ಇದರಿಂದ ಸಹಾಯಕವಾಗಿದೆ.

ಕಳೆದೊಂದು ವರ್ಷದಲ್ಲಿ ವಿಶ್ವದ ಅನೇಕ ಕುಟುಂಬಗಳು ತಮ್ಮಲ್ಲಿರುವ ಕರಕುಶಲತೆಯನ್ನ ಉದ್ಯಮವನ್ನಾಗಿ ಬದಲಾಯಿಸಿಕೊಂಡಿದೆ. ಅದೇ ರೀತಿ ಲಂಡನ್​ನ ನಿವಾಸಿಯಾದ ಫ್ಲೋರಾ ಬ್ಲತ್​ವಾಯ್ತ್​​ ಎಂಬವರು ತಮ್ಮಲ್ಲಿರುವ ಪ್ರತಿಭೆಯನ್ನೇ ಉದ್ಯಮವನ್ನಾಗಿ ಬದಲಾಯಿಸಿಕೊಂಡು ಹಣ ಗಳಿಕೆ ಮಾಡ್ತಿದ್ದಾರೆ.

ಲಾಕ್​ಡೌನ್​ ಸಂದರ್ಭದಲ್ಲಿ ಫ್ಲೋರಾ, ಪ್ಲಾಸ್ಟಿಕ್​ ತ್ಯಾಜ್ಯಗಳನ್ನ ಬಳಸಿಕೊಂಡು ವಿಧವಿಧವಾದ ಕಾರ್ಡ್​ಗಳನ್ನ ತಯಾರು ಮಾಡೋಕೆ ಶುರು ಮಾಡಿದ್ರು. ಇದೀಗ ಫ್ಲೋರಾ ಎಲ್ಲಾ ಬಗೆಯ ಕಾರ್ಡ್​ಗಳನ್ನ ತಯಾರಿಸಿಕೊಡ್ತಿದ್ದಾರೆ.

ಮಾಸ್ಕ್​ ಹಾಕಿಕೊಳ್ಳಲು ನಿರಾಕರಿಸಿದ ದಂಪತಿಗೆ ತಕ್ಕ ಪಾಠ..! ವಿಡಿಯೋ ವೈರಲ್

ಬ್ರಿಟನ್​ನ ಸಮುದ್ರದ ತೀರ ಹಾಗೂ ನದಿಗಳ ದಂಡೆಯಲ್ಲಿ ಫ್ಲೋರಾ ಪ್ಲಾಸ್ಟಿಕ್​ ತ್ಯಾಜ್ಯವನ್ನ ಸಂಗ್ರಹ ಮಾಡ್ತಾರೆ. ಇದನ್ನ ಬಳಸಿ ಗ್ರೀಟಿಂಗ್​ ಕಾರ್ಡ್​ಗಳನ್ನ ತಯಾರು ಮಾಡೋ ಪ್ಲೋರಾ ಕಾರ್ಡ್​ನ ತುದಿಯಲ್ಲಿ ಈ ತ್ಯಾಜ್ಯವನ್ನ ಎಲ್ಲಿ ಸಂಗ್ರಹಿಸಿದ್ದು ಎಂಬುದನ್ನ ಉಲ್ಲೇಖಿಸ್ತಾರೆ.

2019ರಿಂದಲೇ ಸಮುದ್ರದ ತೀರದಲ್ಲಿರುವ ಪ್ಲಾಸ್ಟಿಕ್​ ತ್ಯಾಜ್ಯಗಳನ್ನ ಫ್ಲೋರಾ ಸ್ವಚ್ಛ ಮಾಡುತ್ತಿದ್ದರು. ಬಳಿಕ ಇದರಲ್ಲಿ ಕೆಲ ಪ್ಲಾಸ್ಟಿಕ್​ಗಳು ಆಕರ್ಷಕವಾಗಿ ಕಂಡವು. ಈ ವೇಳೆ ಅವರಿಗೆ ನಾನ್ಯಾಕೆ ಈ ತ್ಯಾಜ್ಯಗಳಿಂದ ಏನಾದರೂ ಕಲೆಯನ್ನ ಹೊರತರಬಾರದು ಎಂದೆನಿಸಿದೆ. ಮೊಟ್ಟ ಮೊದಲ ಬಾರಿಗೆ ತನ್ನ ಸಹೋದರಿಯ ಮದುವೆ ಪತ್ರಿಕೆ ತಯಾರಿಸಿದ ಫ್ಲೋರಾ ಇದೀಗ ಎಲ್ಲಾ ಬಗೆಯ ಕಾರ್ಡ್​ಗಳನ್ನ ಮಾಡಿಕೊಡ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...