alex Certify ಮಾಸ್ಕ್​ ಹಾಕಿಕೊಳ್ಳಲು ನಿರಾಕರಿಸಿದ ದಂಪತಿಗೆ ತಕ್ಕ ಪಾಠ..! ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಸ್ಕ್​ ಹಾಕಿಕೊಳ್ಳಲು ನಿರಾಕರಿಸಿದ ದಂಪತಿಗೆ ತಕ್ಕ ಪಾಠ..! ವಿಡಿಯೋ ವೈರಲ್

ಕೊರೊನಾ ಸೋಂಕು ನಮ್ಮ ಜೀವನವನ್ನೇ ಬದಲಾಯಿಸಿಬಿಟ್ಟಿದೆ. ಸಾಮಾಜಿಕ ಅಂತರ, ಮಾಸ್ಕ್​ ಬಳಕೆ ಇದರಲ್ಲೇ ನಾವು ಕಳೆದುಹೋಗ್ತಿದ್ದೇವೆ. ಸಾರ್ವಜನಿಕ ಸ್ಥಳಗಳಲ್ಲಿ ಇದರಡೂ ವಿಚಾರಗಳು ಕಡ್ಡಾಯವಾಗಿ ಬದಲಾಗಿದೆ.

ವಿಶ್ವದಲ್ಲಿ ಕೊರೊನಾ ವೈರಸ್​ ತಾಂಡವವಾಡುತ್ತಿರೋದ್ರ ಮಧ್ಯೆಯೇ ಕೆಲ ಮಂದಿ ಮಾತ್ರ ಇನ್ನೂ ಮಾಸ್ಕ್​ ಹಾಕಿಕೊಳ್ಳೋದಕ್ಕೆ ಅಸಡ್ಡೆ ತೋರುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಮಾಡಿದ ಅನೇಕರಿಗೆ ತಕ್ಕ ಶಾಸ್ತಿಯನ್ನೂ ಮಾಡಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ಈ ವಿಡಿಯೋದಲ್ಲೂ ಇಂತಹದ್ದೇ ಒಂದು ಘಟನೆ ನಡೆದಿದೆ.

ಬ್ರೆಂಡೊನ್​ ಎಡ್ಲರ್​ ಎಂಬವರು ಟಿಕ್​ಟಾಕ್​​ನಲ್ಲಿ ಈ ವಿಡಿಯೋವನ್ನ ಶೇರ್​ ಮಾಡಿದ್ದಾರೆ. ಈ ವಿಡಿಯೋದಲ್ಲಿ ಏರ್​ಲೈನ್​ ಸಿಬ್ಬಂದಿ ಪ್ರಯಾಣಿಕರಿಗೆ ಮಾಸ್ಕ್​ ಹಾಕಿಕೊಂಡೇ ಇರಿ ಎಂದು ಹೇಳುತ್ತಿದ್ದಾರೆ.

ಆದರೆ ಇದಕ್ಕೆ ದಂಪತಿ ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆ ಅವರನ್ನ ವಿಮಾನದಿಂದ ಕೆಳಗಿಳಿಸಲಾಗಿದೆ. ದಂಪತಿ ಫ್ಲೈಟ್​ನಿಂದ ಕೆಳಗಿಳಿಯಲು ಆರಂಭಿಸ್ತಾ ಇದ್ದಂತೆ ಫ್ಲೈಟ್​ ಸಿಬ್ಬಂದಿ ಹಾಗೂ ಸಹ ಪ್ರಯಾಣಿಕರು ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ. ಈ ವಿಡಿಯೋ ಟಿಕ್​ಟಾಕ್​ ಮಾತ್ರವಲ್ಲದೇ ಸಾಮಾಜಿಕ ಜಾಲತಾಣದ ಇತರೆ ವೇದಿಕೆಗಳಲ್ಲಿ ಶೇರ್​ ಮಾಡಲಾಗ್ತಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...