ಬೀಚ್ನಲ್ಲಿ ಇದ್ದ ಮನುಷ್ಯನ ಆಕೃತಿ ಕಂಡು ನಿಜವಾದ ಶವ ಎಂದು ಭಾವಿಸಿದ ಫ್ಲೋರಿಡಾದ ಮಹಿಳೆ ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದಾರೆ. ಆದರೆ ಬಳಿಕ ಇದೊಂದು ಮನುಷ್ಯನ ರೂಪದಲ್ಲಿರುವ ಗೊಂಬೆ ಎಂಬ ಅಂಶ ಬೆಳಕಿಗೆ ಬಂದಿದೆ .
ಎಸ್ಕಾಂಬಿಯಾ ಕೌಂಟಿಯ ಪರ್ಡಿಯೋ ಕೀ ಎಂಬ ಸಮುದ್ರದ ದಡದಲ್ಲಿ ಮಲಗಿರುವ ರೀತಿಯಲ್ಲಿ ಇರುವ ಮನುಷ್ಯನ ಆಕೃತಿಯ ಫೋಟೋವನ್ನ ಫೇಸ್ಬುಕ್ನಲ್ಲಿ ಶೇರ್ ಮಾಡಲಾಗಿದೆ. ಕ್ಯಾಥ್ಲೀನ್ ಎಂಬ ಮಹಿಳೆ ಈ ಗೊಂಬೆಯನ್ನ ಕಂಡು ಶಿರಚ್ಚೇಧವಾದ ಮನುಷ್ಯನ ಮೃತದೇಹ ಎಂದು ಹೌಹಾರಿದ್ದಾಳೆ.
ಸಂಪೂರ್ಣ ಪಾಚಿಯಿಂದ ಆವೃತವಾದ ಈ ಗೊಂಬೆ ದೂರದಿಂದ ನೋಡಿದ್ರೆ ಥೇಟ್ ಮನುಷ್ಯನ ಮೃತದೇಹದಂತೆ ಭಾಸವಾಗುತ್ತೆ. ಆದರೆ ಹತ್ತಿರದಿಂದ ನೋಡಿದ್ರೆ ಕಾಲು ಹಾಗೂ ಕುತ್ತಿಗೆ ಭಾಗದಲ್ಲಿ ರಂಧ್ರ ಇರೋದನ್ನ ನೋಡಬಹುದಾಗಿದೆ.