alex Certify ಅಬ್ಬಬ್ಬಾ….! ಬರೋಬ್ಬರಿ 26 ವರ್ಷಗಳ ಬಳಿಕ ಸಮರ್ಪಕವಾಗಿ ಉಸಿರಾಡಿದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಬ್ಬಬ್ಬಾ….! ಬರೋಬ್ಬರಿ 26 ವರ್ಷಗಳ ಬಳಿಕ ಸಮರ್ಪಕವಾಗಿ ಉಸಿರಾಡಿದ ಮಹಿಳೆ

ಬರೋಬ್ಬರಿ 26 ವರ್ಷಗಳ ಬಳಿಕ ಮೂಗಿನಲ್ಲಿ ಸಮರ್ಪಕವಾಗಿ ಉಸಿರಾಡಲು ಸಾಧ್ಯವಾದ ಕಾರಣ ಮಹಿಳೆಯೊಬ್ಬಳು ಸಖತ್​ ಖುಷ್​ ಆಗಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಸೈನಸ್​ ಶಸ್ತ್ರಚಿಕಿತ್ಸೆ ಬಳಿಕ ತಾನು ಸರಿಯಾಗಿ ಉಸಿರಾಡೋದನ್ನ ಕಲಿತೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ.

ರೆಡಿಟ್​ನಲ್ಲಿ ಸ್ವತಃ ಈ ಮಹಿಳೆ ತನ್ನ ವಿಡಿಯೋವನ್ನ ಶೇರ್​ ಮಾಡಿದ್ದಾಳೆ. ಅಲ್ಲದೇ ಜೀವಮಾನದಲ್ಲಿ ಇದೇ ಮೊದಲ ಬಾರಿಗೆ ನಾನು ಸಾಮಾನ್ಯರಂತೆ ಉಸಿರಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.

ವಿಪರೀತ ಬಾಯಾರಿಕೆಯೇ….? ಈ ಕಾಯಿಲೆ ಇರಬಹುದು ತಿಳಿದುಕೊಳ್ಳಿ

8 ದಿನಗಳ ಹಿಂದೆ ನಾನು ಸೈನಸ್​ ಶಸ್ತ್ರಚಿಕಿತ್ಸೆಗೆ ಒಳಗಾದೆ. ಇಂದು ನನ್ನ ಹೊಲಿಗೆಗಳನ್ನ ಬಿಡಿಸಲಾಗಿದ್ದು ನಾನೀಗ ಎಲ್ಲರಂತೆ ಮೂಗಿನಲ್ಲಿ ಉಸಿರಾಡಬಲ್ಲೆ. 26 ವರ್ಷದಲ್ಲಿ ಇದೇ ಮೊದಲ ಬಾರಿಗೆ ನಾನು ಈ ರೀತಿ ಉಸಿರಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.

ಮೂಗಿನ ಮೂಳೆಯ ರಚನೆಯಲ್ಲಿ ಕೊಂಚ ಏರುಪೇರಾದ್ರೂ ಈ ಸೈನಸ್​ ಸಮಸ್ಯೆ ಕಾಣಿಸಿಕೊಳ್ಳುತ್ತೆ. ಈ ಸಮಸ್ಯೆ ಇರುವ ವ್ಯಕ್ತಿ ಸಾಮಾನ್ಯವಾಗಿ ಶೀತದಿಂದ ಬಳಲುತ್ತಲೇ ಇರುತ್ತಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...