
ರೆಡಿಟ್ನಲ್ಲಿ ಸ್ವತಃ ಈ ಮಹಿಳೆ ತನ್ನ ವಿಡಿಯೋವನ್ನ ಶೇರ್ ಮಾಡಿದ್ದಾಳೆ. ಅಲ್ಲದೇ ಜೀವಮಾನದಲ್ಲಿ ಇದೇ ಮೊದಲ ಬಾರಿಗೆ ನಾನು ಸಾಮಾನ್ಯರಂತೆ ಉಸಿರಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.
ವಿಪರೀತ ಬಾಯಾರಿಕೆಯೇ….? ಈ ಕಾಯಿಲೆ ಇರಬಹುದು ತಿಳಿದುಕೊಳ್ಳಿ
8 ದಿನಗಳ ಹಿಂದೆ ನಾನು ಸೈನಸ್ ಶಸ್ತ್ರಚಿಕಿತ್ಸೆಗೆ ಒಳಗಾದೆ. ಇಂದು ನನ್ನ ಹೊಲಿಗೆಗಳನ್ನ ಬಿಡಿಸಲಾಗಿದ್ದು ನಾನೀಗ ಎಲ್ಲರಂತೆ ಮೂಗಿನಲ್ಲಿ ಉಸಿರಾಡಬಲ್ಲೆ. 26 ವರ್ಷದಲ್ಲಿ ಇದೇ ಮೊದಲ ಬಾರಿಗೆ ನಾನು ಈ ರೀತಿ ಉಸಿರಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.
ಮೂಗಿನ ಮೂಳೆಯ ರಚನೆಯಲ್ಲಿ ಕೊಂಚ ಏರುಪೇರಾದ್ರೂ ಈ ಸೈನಸ್ ಸಮಸ್ಯೆ ಕಾಣಿಸಿಕೊಳ್ಳುತ್ತೆ. ಈ ಸಮಸ್ಯೆ ಇರುವ ವ್ಯಕ್ತಿ ಸಾಮಾನ್ಯವಾಗಿ ಶೀತದಿಂದ ಬಳಲುತ್ತಲೇ ಇರುತ್ತಾರೆ.