ಅಮೆರಿಕ ಸೇನೆಯ ಕ್ಯಾಪ್ಟನ್ ಕೆಟ್ಲಿನ್ ಹರ್ನಾಂಡೆಜ್ ಅವರು ವಿಶಿಷ್ಟವಾದ ರೇಸ್‌ನಲ್ಲಿ ದಾಖಲೆ ನಿರ್ಮಿಸಿ ಗಿನ್ನೆಸ್ ಪುಸ್ತಕದಲ್ಲಿ ಸೇರಿದ್ದಾರೆ. 36 ಕೆಜಿಯಷ್ಟು ತೂಕದ ಬಾಂಬ್ ಸೂಟ್ ಧರಿಸಿಕೊಂಡು ಈಕೆ ಒಂದು ಮೈಲಿ ದೂರ ಓಡಿದ್ದಾರೆ.
ವರ್ಜೀನಿಯಾದ ಜಾರ್ಜ್ ಮೇಸನ್ ವಿವಿಯಲ್ಲಿ ಈ ಓಟ ಆಯೋಜಿಸಲಾಗಿತ್ತು. ಇಷ್ಟು ಭಾರವಾದ ಸೂಟ್‌ನಲ್ಲಿ ಈಕೆ ಒಂದು ಮೈಲಿ ದೂರವನ್ನು 10 ನಿಮಿಷ 23 ಸೆಕೆಂಡ್‌ಗಳಲ್ಲಿ ಓಡಿ ಮುಗಿಸಿದ್ದಾರೆ.
ತನ್ನ ಈ ಕಾರ್ಯದಿಂದ ಎಲ್ಲರ ಹೃದಯ ಗೆದ್ದ ಡೆಲಿವರಿ ಬಾಯ್
ಬಾಂಬ್ ನಿಷ್ಕ್ರಿಯಗೊಳಿಸುವ ಮಂದಿಯ ಆತ್ಮರಕ್ಷಣೆಗೆಂದು ಬಾಂಬ್ ಸೂಟ್ ಅಭಿವೃದ್ಧಿಪಡಿಸಲಾಗಿದೆ. ಈ ಸೂಟ್ ಬಹಳ ಬಿಗುವಾಗಿದ್ದು, ಉಸಿರುಗಟ್ಟಿಸುವಂತೆ ಇರುತ್ತದೆ. ಅದನ್ನು ದೀರ್ಘಾವಧಿಗೆ ಧರಿಸುವುದರಿಂದ ಹೃದಯ ಹಾಗೂ ಶ್ವಾಸಕೋಶಗಳ ಮೇಲೆ ಒತ್ತಡ ಬೀಳುತ್ತದೆ. ಹೀಗಾಗಿ ಈ ಸೂಟ್‌ನಲ್ಲಿ ಒಂದು ಕಿಮೀ ಓಡುವುದೂ ಸಹ ಬಹಳ ದೊಡ್ಡ ಸಾಹಸವೆಂದೇ ಹೇಳಬೇಕು.