ಅಮೆರಿಕ ಚುನಾವಣೆಯಲ್ಲಿ 101.2 ಮಿಲಿಯನ್ಗಿಂತಲೂ ಹೆಚ್ಚಿನ ಮತದಾರರು ತಮ್ಮ ವೋಟ್ಗಳನ್ನ ಮೇಲ್ ಮೂಲಕ ಇಲ್ಲವೇ ವೈಯಕ್ತಿಕವಾಗಿ ಚಲಾವಣೆ ಮಾಡುವ ಮೂಲಕ ಆರಂಭಿಕ ಮತದಾನದ ಹಿಂದಿನ ಎಲ್ಲ ದಾಖಲೆಗಳನ್ನು ಸರಿಗಟ್ಟಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಡೆಮಾಕ್ರಟಿಕ್ ಪಕ್ಷದ ಜೋ ಬಿಡೆನ್ ನಡುವಿನ ಸಮರದಲ್ಲಿ ಈ ವರ್ಷ 160 ಮಿಲಿಯನ್ ಮತಗಳು ದಾಖಲಾಗುತ್ತವೆ ಅಂತಾ ತಜ್ಞರು ಊಹಿಸಿದ್ದರು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಅಲ್ಲದೇ ಈ ಬಾರಿಯ ಆರಂಭಿಕ ಮತದಾನ ಕಳೆದ 100 ವರ್ಷಗಳ ಹಿಂದಿನ ಎಲ್ಲ ದಾಖಲೆಯನ್ನ ಮುರಿದಿದೆ.