alex Certify 87 ವರ್ಷದ ವೃದ್ಧೆಯನ್ನ ದತ್ತು ಪಡೆದ ದಂಪತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

87 ವರ್ಷದ ವೃದ್ಧೆಯನ್ನ ದತ್ತು ಪಡೆದ ದಂಪತಿ….!

ದತ್ತು ತೆಗೆದುಕೊಳ್ಳುವುದು ಎಂಬ ಪದವನ್ನ ಕೇಳಿದಾಕ್ಷಣ ನಮ್ಮ ತಲೆಯಲ್ಲಿ ಸಡನ್​ ಆಗಿ ಅನಾಥ ಮಗುವನ್ನ ದಂಪತಿ ದತ್ತು ಪಡೆದಿರಬಹುದು ಎಂದೆನಿಸುವುದು ಸಹಜ. ಆದರೆ ಬಹಳ ಅಪರೂಪದ ಘಟನೆಯೊಂದರಲ್ಲಿ ಕೆನಡಾದ ಸಲಿಂಗ ಕಾಮಿ ದಂಪತಿ ವೃದ್ಧ ಮಹಿಳೆಯನ್ನ ದತ್ತು ಪಡೆದು ತಮ್ಮ ಕುಟುಂಬದಲ್ಲಿ ಸ್ಥಾನ ನೀಡಿದ್ದಾರೆ.

ಮಾರಿಕೆ ಫಿನ್ಲೇ ಹಾಗೂ ಕ್ಯಾರಿನ್​ ಕೋಪ್​​ ಎಂಬ ಸಲಿಂಗ ಕಾಮಿ ದಂಪತಿ ಕೆಲ ಸಮಯಗಳಿಂದ ವೃದ್ಧ ಮಹಿಳೆ ಎಲೆಜಬೆತ್​​ ಬರ್ಗಾಸ್​ ಎಂಬವರ ಪರಿಚಯ ಹೊಂದಿದ್ದರು. ಈ ವೃದ್ಧ ಮಹಿಳೆಯ ಪತಿ ಸಲಿಂಗ ಕಾಮಿ ದಂಪತಿಯ ಸಹೋದ್ಯೋಗಿ ಆಗಿದ್ದರು. ಪತಿಯ ನಿಧನದ ಬಳಿಕ ಎಲಿಜಬೆತ್​​​ ಈ ದಂಪತಿಗೆ ಹೆಚ್ಚು ಆತ್ಮೀಯರಾಗಿದ್ದರು.

ವೈದ್ಯರ ಸಲಹೆಯಂತೆ ಹೋಮ್​ ಐಸೋಲೇಷನ್​​ನಲ್ಲಿದ್ದ ಸೋಂಕಿತ ಸಾವು

ಈ ದಂಪತಿ ನೋವಾ ಸ್ಕೋಟಿಯಾಗೆ ಶಿಫ್ಟ್ ಆಗುವ ಮುನ್ನ ವೃದ್ಧ ಮಹಿಳೆಯನ್ನೂ ತಮ್ಮೊಂದಿಗೆ ಇರಲು ಬರುವಂತೆ ಕರೆದಿದ್ದಾರೆ. ಇದಕ್ಕೆ 86 ವರ್ಷದ ಎಲಿಜಬೆತ್​​ ಒಪ್ಪಿಗೆಯನ್ನ ನೀಡಿದ್ದರು. ವೃದ್ಧ ಮಹಿಳೆಯನ್ನ ಒಂಟಿಯಾಗಿ ಬಿಟ್ಟಿದ್ದರೆ ಆಕೆ ವೃದ್ದಾಶ್ರಮ ಸೇರಬೇಕಿತ್ತು, ಎಲಿಜಬೆತ್​ ಗೆ ಮಕ್ಕಳೂ ಇಲ್ಲದೇ ಇರೋದ್ರಿಂದ ಆಕೆಯನ್ನ ಇಳಿವಯಸ್ಸಿನಲ್ಲಿ ನೋಡಿಕೊಳ್ಳುವವರು ಯಾರೂ ಇರಲಿಲ್ಲ.

ಈ ಎಲ್ಲಾ ವಿಚಾರವನ್ನ ಗಮನದಲ್ಲಿಟ್ಟುಕೊಂಡ ದಂಪತಿ ಇದೀಗ ಈ ವೃದ್ಧ ಮಹಿಳೆಯನ್ನ ದತ್ತು ಪಡೆದಿದ್ದಾರೆ. ದಂಪತಿ ಹಾಗೂ ವೃದ್ಧೆಯ ನಡುವೆ 20 ವರ್ಷಗಳ ಅಂತರವಿದ್ದರೂ ಇವರ ನಡುವಿನ ಪ್ರೀತಿಗೆ ಯಾವುದೇ ಎಲ್ಲೆಯಿಲ್ಲ ಎಂಬಂತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...