ದತ್ತು ತೆಗೆದುಕೊಳ್ಳುವುದು ಎಂಬ ಪದವನ್ನ ಕೇಳಿದಾಕ್ಷಣ ನಮ್ಮ ತಲೆಯಲ್ಲಿ ಸಡನ್ ಆಗಿ ಅನಾಥ ಮಗುವನ್ನ ದಂಪತಿ ದತ್ತು ಪಡೆದಿರಬಹುದು ಎಂದೆನಿಸುವುದು ಸಹಜ. ಆದರೆ ಬಹಳ ಅಪರೂಪದ ಘಟನೆಯೊಂದರಲ್ಲಿ ಕೆನಡಾದ ಸಲಿಂಗ ಕಾಮಿ ದಂಪತಿ ವೃದ್ಧ ಮಹಿಳೆಯನ್ನ ದತ್ತು ಪಡೆದು ತಮ್ಮ ಕುಟುಂಬದಲ್ಲಿ ಸ್ಥಾನ ನೀಡಿದ್ದಾರೆ.
ಮಾರಿಕೆ ಫಿನ್ಲೇ ಹಾಗೂ ಕ್ಯಾರಿನ್ ಕೋಪ್ ಎಂಬ ಸಲಿಂಗ ಕಾಮಿ ದಂಪತಿ ಕೆಲ ಸಮಯಗಳಿಂದ ವೃದ್ಧ ಮಹಿಳೆ ಎಲೆಜಬೆತ್ ಬರ್ಗಾಸ್ ಎಂಬವರ ಪರಿಚಯ ಹೊಂದಿದ್ದರು. ಈ ವೃದ್ಧ ಮಹಿಳೆಯ ಪತಿ ಸಲಿಂಗ ಕಾಮಿ ದಂಪತಿಯ ಸಹೋದ್ಯೋಗಿ ಆಗಿದ್ದರು. ಪತಿಯ ನಿಧನದ ಬಳಿಕ ಎಲಿಜಬೆತ್ ಈ ದಂಪತಿಗೆ ಹೆಚ್ಚು ಆತ್ಮೀಯರಾಗಿದ್ದರು.
ವೈದ್ಯರ ಸಲಹೆಯಂತೆ ಹೋಮ್ ಐಸೋಲೇಷನ್ನಲ್ಲಿದ್ದ ಸೋಂಕಿತ ಸಾವು
ಈ ದಂಪತಿ ನೋವಾ ಸ್ಕೋಟಿಯಾಗೆ ಶಿಫ್ಟ್ ಆಗುವ ಮುನ್ನ ವೃದ್ಧ ಮಹಿಳೆಯನ್ನೂ ತಮ್ಮೊಂದಿಗೆ ಇರಲು ಬರುವಂತೆ ಕರೆದಿದ್ದಾರೆ. ಇದಕ್ಕೆ 86 ವರ್ಷದ ಎಲಿಜಬೆತ್ ಒಪ್ಪಿಗೆಯನ್ನ ನೀಡಿದ್ದರು. ವೃದ್ಧ ಮಹಿಳೆಯನ್ನ ಒಂಟಿಯಾಗಿ ಬಿಟ್ಟಿದ್ದರೆ ಆಕೆ ವೃದ್ದಾಶ್ರಮ ಸೇರಬೇಕಿತ್ತು, ಎಲಿಜಬೆತ್ ಗೆ ಮಕ್ಕಳೂ ಇಲ್ಲದೇ ಇರೋದ್ರಿಂದ ಆಕೆಯನ್ನ ಇಳಿವಯಸ್ಸಿನಲ್ಲಿ ನೋಡಿಕೊಳ್ಳುವವರು ಯಾರೂ ಇರಲಿಲ್ಲ.
ಈ ಎಲ್ಲಾ ವಿಚಾರವನ್ನ ಗಮನದಲ್ಲಿಟ್ಟುಕೊಂಡ ದಂಪತಿ ಇದೀಗ ಈ ವೃದ್ಧ ಮಹಿಳೆಯನ್ನ ದತ್ತು ಪಡೆದಿದ್ದಾರೆ. ದಂಪತಿ ಹಾಗೂ ವೃದ್ಧೆಯ ನಡುವೆ 20 ವರ್ಷಗಳ ಅಂತರವಿದ್ದರೂ ಇವರ ನಡುವಿನ ಪ್ರೀತಿಗೆ ಯಾವುದೇ ಎಲ್ಲೆಯಿಲ್ಲ ಎಂಬಂತಿದೆ.