alex Certify ಪ್ರಾಣಿಗೆ ಕಾರನ್ನ ನೆಕ್ಕಲು ಬಿಡಬೇಡಿ ಎಂದಿದೆ ಈ ಸರ್ಕಾರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಾಣಿಗೆ ಕಾರನ್ನ ನೆಕ್ಕಲು ಬಿಡಬೇಡಿ ಎಂದಿದೆ ಈ ಸರ್ಕಾರ..!

ಕೆನಡಾದ ಪಟ್ಟಣವೊಂದರಲ್ಲಿ ಮೂಸ್​ ಪ್ರಾಣಿಯ ಕುರಿತಂತೆ ಸೂಚನೆಯೊಂದನ್ನ ಹೊರಡಿಸಲಾಗಿದ್ದು ಈ ಸೂಚನೆ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಆಲ್ಬರ್ಟಾ ಪ್ರಾಂತ್ಯದ ಜಾಸ್ಟರ್​ ಪಟ್ಟಣದಲ್ಲಿ ವಾಹನ ಚಾಲಕರಿಗೆ ನಿಮ್ಮ ಕಾರುಗಳನ್ನ ಮೂಸ್​ಗಳಿಗೆ ನೆಕ್ಕಲು ಬಿಡಬೇಡಿ ಎಂದು ಸೂಚನೆ ಹೊರಡಿಸಲಾಗಿದೆ.

ವಾತಾವರಣದ ರಸ್ತೆಯಲ್ಲಿ ಮಂಜುಗಡ್ಡೆ ನಿರ್ಮಾಣವಾಗದಂತೆ ತಡೆಯಲು ಉಪ್ಪನ್ನ ಹಾಕಲಾಗುತ್ತೆ. ಉದ್ಯಾನವನದ ಸರೋವರಗಳಲ್ಲಿ ಉಪ್ಪಿನ ನೀರನ್ನ ಸವಿಯೋ ಪ್ರಾಣಿಗಳು ರಸ್ತೆಯಲ್ಲೂ ಈ ರುಚಿಯನ್ನ ಕಂಡುಕೊಂಡರೆ ಮುಂದೆ ಅದು ಮೂಸ್​ ಹಾಗೂ ವಾಹನ ಚಾಲಕರಿಬ್ಬರಿಗೂ ಅಪಾಯವಾಗಿದೆ ಎಂದು ಜಾಸ್ಪರ್​ ರಾಷ್ಟ್ರೀಯ ಉದ್ಯಾನವನದ ವಕ್ತಾರರು ಹೇಳಿದ್ದಾರೆ.

ಈ ಸೂಚನೆಯನ್ನ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿರುವ ನೆಟ್ಟಿಗರು ಮೂಸ್​ ಕಾರನ್ನ ನೆಕ್ಕಲು ಹೋದರೆ ಅದನ್ನ ತಡೆಯುವವರು ಯಾರು ಎಂದು ಫನ್ನಿ ಪ್ರಶ್ನೆಯನ್ನ ಕೇಳುತ್ತಿದ್ದಾರೆ.

— Carolyn Campbell (@_CLCampbell) November 15, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...