
ಆಲ್ಬರ್ಟಾ ಪ್ರಾಂತ್ಯದ ಜಾಸ್ಟರ್ ಪಟ್ಟಣದಲ್ಲಿ ವಾಹನ ಚಾಲಕರಿಗೆ ನಿಮ್ಮ ಕಾರುಗಳನ್ನ ಮೂಸ್ಗಳಿಗೆ ನೆಕ್ಕಲು ಬಿಡಬೇಡಿ ಎಂದು ಸೂಚನೆ ಹೊರಡಿಸಲಾಗಿದೆ.
ವಾತಾವರಣದ ರಸ್ತೆಯಲ್ಲಿ ಮಂಜುಗಡ್ಡೆ ನಿರ್ಮಾಣವಾಗದಂತೆ ತಡೆಯಲು ಉಪ್ಪನ್ನ ಹಾಕಲಾಗುತ್ತೆ. ಉದ್ಯಾನವನದ ಸರೋವರಗಳಲ್ಲಿ ಉಪ್ಪಿನ ನೀರನ್ನ ಸವಿಯೋ ಪ್ರಾಣಿಗಳು ರಸ್ತೆಯಲ್ಲೂ ಈ ರುಚಿಯನ್ನ ಕಂಡುಕೊಂಡರೆ ಮುಂದೆ ಅದು ಮೂಸ್ ಹಾಗೂ ವಾಹನ ಚಾಲಕರಿಬ್ಬರಿಗೂ ಅಪಾಯವಾಗಿದೆ ಎಂದು ಜಾಸ್ಪರ್ ರಾಷ್ಟ್ರೀಯ ಉದ್ಯಾನವನದ ವಕ್ತಾರರು ಹೇಳಿದ್ದಾರೆ.
ಈ ಸೂಚನೆಯನ್ನ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿರುವ ನೆಟ್ಟಿಗರು ಮೂಸ್ ಕಾರನ್ನ ನೆಕ್ಕಲು ಹೋದರೆ ಅದನ್ನ ತಡೆಯುವವರು ಯಾರು ಎಂದು ಫನ್ನಿ ಪ್ರಶ್ನೆಯನ್ನ ಕೇಳುತ್ತಿದ್ದಾರೆ.
