alex Certify ಯಾವ ದೇಶದಲ್ಲಿ ಮೊದಲು ಬರಲಿದೆ ಕೊರೊನಾ ಲಸಿಕೆ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಾವ ದೇಶದಲ್ಲಿ ಮೊದಲು ಬರಲಿದೆ ಕೊರೊನಾ ಲಸಿಕೆ….?

Who would be the first Country to get a Covid-19 Vaccine

ಕೊರೊನಾ ವೈರಸ್‌ನ ಮೊದಲ ಲಸಿಕೆಯನ್ನು ಯಾವ ದೇಶ ತಯಾರಿಸಲಿದೆ ಎಂಬ ಪ್ರಶ್ನೆ ಈಗ ಎದ್ದಿದೆ.

ಯುಎಸ್, ಭಾರತ, ರಷ್ಯಾ, ಬ್ರಿಟನ್ ಸೇರಿದಂತೆ ಹಲವು ದೇಶಗಳಲ್ಲಿ ಒಂದು ಡಜನ್ ಗೂ ಹೆಚ್ಚು ಕೊರೊನಾ ಲಸಿಕೆಗಳ ಪರೀಕ್ಷೆ ಬೇರೆ ಬೇರೆ ಹಂತದಲ್ಲಿದೆ. ಆದರೆ ಈ ಎಲ್ಲ ದೇಶಗಳ ಪೈಕಿ ಲಸಿಕೆ ತಯಾರಿಸುವಲ್ಲಿ ಬ್ರಿಟನ್ ಮುಂಚೂಣಿಯಲ್ಲಿದೆ.

ಲಂಡನ್‌ನ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಲಸಿಕೆಯ ಕ್ಲಿನಿಕಲ್ ಪ್ರಯೋಗ ಅಂತಿಮ ಹಂತದಲ್ಲಿದೆ. ಎಲ್ಲವೂ ಸರಿಯಾಗಿ ನಡೆದರೆ, ಸೆಪ್ಟೆಂಬರ್ ನಲ್ಲಿ ಕೊರೊನಾ ಲಸಿಕೆ ಹೊರ ಬರಲಿದೆ.

ಕೊರೊನಾ ವೈರಸ್‌ಗೆ ಸುಮಾರು 160 ಲಸಿಕೆಗಳನ್ನು ಕಂಡು ಹಿಡಿಯುವ ಪ್ರಯತ್ನ ನಡೆಯುತ್ತಿದೆ. ಈ ಪೈಕಿ 138 ತಾಂತ್ರಿಕ ಪೂರ್ವ ಪ್ರಯೋಗದಲ್ಲಿದೆ. ಈ ಪೈಕಿ 17 ಮೊದಲ ಹಂತದಲ್ಲಿ, 9 ಎರಡನೇ ಹಂತದಲ್ಲಿ ಮತ್ತು ಮೂರು ಮೂರನೇ ಹಂತದಲ್ಲಿವೆ.

ಇಲ್ಲಿಯವರೆಗೆ ಹೆಚ್ಚಿನ ಕಂಪನಿಗಳು ಮೂರನೇ ಹಂತದ ಕ್ಲಿನಿಕಲ್ ಪ್ರಯೋಗವನ್ನು ತಲುಪಿಲ್ಲ. ಕ್ಲಿನಿಕಲ್ ಪ್ರಯೋಗಗಳು ಸಹ ಮೂರು ಹಂತಗಳನ್ನು ಹೊಂದಿವೆ. ಮೊದಲ ಹಂತದಲ್ಲಿ 100 ಕ್ಕಿಂತ ಕಡಿಮೆ ಜನರ ಮೇಲೆ ಪ್ರಯೋಗ ನಡೆಯುತ್ತದೆ. ಎರಡನೇ ಹಂತದಲ್ಲಿ  ನೂರಾರು ಜನರು ಮತ್ತು ಮೂರನೇ ಹಂತದಲ್ಲಿ ಸಾವಿರಾರು ಜನರ ಮೇಲೆ ಪರೀಕ್ಷೆ ನಡೆಯುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...