ಬಲೂಚಿಸ್ತಾನದಲ್ಲಿ ಪಾಕಿಸ್ತಾನದ ದೌರ್ಜನ್ಯದ ಬಗ್ಗೆ ಹಲವಾರು ವರ್ಷಗಳಿಂದ ಧ್ವನಿ ಎತ್ತಿದ್ದ ಬಲೂಚಿಸ್ತಾನ್ ಕಾರ್ಯಕರ್ತೆ ಕರಿಮಾ ಬಲೂಚ್ ಕೆನಡಾದ ಟೊರೊಂಟೊದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ವರದಿಗಳ ಪ್ರಕಾರ 2016ರಲ್ಲಿ ಪಾಕ್ನಿಂದ ಪಲಾಯನ ಮಾಡಿದ್ದ 35 ವರ್ಷದ ಮಾಜಿ ವಿದ್ಯಾರ್ಥಿ ಮುಖಂಡೆ ಹಾಗೂ ಕಾರ್ಯಕರ್ತೆ ಭಾನುವಾರ ಟೊರೆಂಟೊದಿಂದ ನಾಪತ್ತೆಯಾಗಿದ್ದರು. ಆದರೆ ಟೊರೆಂಟೋದ ನದಿಯೊಂದರಲ್ಲಿ ಈಕೆಯ ಶವ ಪತ್ತೆಯಾಗಿದೆ. ಇದು ಐಎಸ್ಐ ದಾಳಿ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಕರಿಮಾ ಬಲೂಚ್ ಪಾಕ್ನ ಕೆನಡಾ ನಿರಾಶ್ರಿತೆಯಾಗಿದ್ದು 2016ರಲ್ಲಿ ಪಾಕ್ ಸರ್ಕಾರದ ವಿರುದ್ಧ ವಿಮರ್ಶೆ ಮಾಡುವ ಮೂಲಕ ಸುದ್ದಿಯಾದರು. ಈ ಹಿಂದೆ ಪಾಕ್ ಮನೋವಿಜ್ಞಾನ ವಿದ್ಯಾಥಿರ್ನಿಯಾಗಿದ್ದ ಈಕೆ ಬಲೂಚ್ ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷೆಯೂ ಹೌದು.
2016ರಲ್ಲಿ ಕರಿಮಾ ಬಿಬಿಸಿಯ ಟಾಪ್ 10 ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದರು. ಪಾಕಿಸ್ತಾನದ ವಿರುದ್ಧವಾಗಿ ಕರಿಮಾ ಮಾಡುತ್ತಿದ್ದ ಟೀಕೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ದೊರಕಿತ್ತು . ಪ್ರಧಾನಿಗೆ ರಕ್ಷಾ ಬಂಧನದ ಶುಭ ಕೋರಿದ ಬಳಿಕ ಭಾರತೀಯರಿಗೂ ಕರಿಮಾ ಚಿರಪರಿಚಿತರಾಗಿದ್ದರು.