ಮೊದಲೇ ಮಹಿಳೆಯರ ರಕ್ಷಣೆಗೆಂದು ತರಲಾದ ಕಾನೂನು ದುರ್ಬಳಕೆಯ ಅನೇಕ ನಿದರ್ಶನಗಳು ಹೊರಗೆ ಬಂದು ಎಲ್ಲೆಡೆ ಅಪನಂಬಿಕೆಯ ವಾತಾವರಣ ಹೆಚ್ಚುತ್ತಿದೆ. ಇದೇ ವೇಳೆ ವಿಶ್ವ ಸಂಸ್ಥೆಯ ಆರೋಗ್ಯ ಏಜೆನ್ಸಿ ಬಿಡುಗಡೆ ಮಾಡಿರುವ ವರದಿಯೊಂದು ಈ ಅಪನಂಬಿಕೆಯನ್ನು ಇನ್ನಷ್ಟು ಹೆಚ್ಚಿಸುವಂತಿದೆ.
ಜಗತ್ತಿನಾದ್ಯಂತ ಪ್ರತಿ ಮೂವರಲ್ಲಿ ಒಬ್ಬರು ಮಹಿಳೆಗೆ ತನ್ನ ಜೀವಮಾನದಲ್ಲಿ ಒಮ್ಮೆಯಾದರೂ ಲೈಂಗಿಕ ಕಿರುಕುಳದ ಅನುಭವವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿಯೊಂದು ತಿಳಿಸುತ್ತಿದೆ.
ಮಹಿಳೆಯರ ವಿರುದ್ಧ ಹಿಂಸಾಚಾರ ಸಂಬಂಧ ಸಮೀಕ್ಷೆ ನಡೆಸಿ ಸಿದ್ಧಪಡಿಸಲಾದ ಈ ವರದಿಯಲ್ಲಿ, ರಿಲೇಷನ್‌ಶಿಪ್‌ನಲ್ಲಿದ್ದ ಯುವತಿಯರ ಪೈಕಿ ಕಾಲು ಭಾಗದಷ್ಟು ಮಂದಿಗೆ ತಮ್ಮ 20ನೇ ವಯಸ್ಸಿಗೂ ಮುನ್ನವೇ ತಂತಮ್ಮ ಸಂಗಾತಿಗಳಿಂದ ಲೈಂಗಿಕ ಒತ್ತಡಗಳನ್ನು ಎದುರಿಸುವ ಪರಿಸ್ಥಿತಿ ಬಂದಿದೆ ಎಂದು ತಿಳಿದು ಬಂದಿದೆ.
2010-2018ರ ನಡುವಿನ ಅವಧಿಯ ಕಾಲಘಟ್ಟವನ್ನು ಅಧ್ಯಯನಕ್ಕೆ ಪರಿಗಣಿಸಲಾಗಿದ್ದು, ಕೋವಿಡ್-19 ಸಾಂಕ್ರಮಿಕ ಅವಧಿಯನ್ನು ಗಣನೆಗೆ ತೆಗೆದುಕೊಂಡಿಲ್ಲ.
ಊಹಿಸಲಾರದ ಘಟನೆ ನಡೆದಿದ್ದರಿಂದ ಮುಜುಗರಕ್ಕೊಳಗಾದ ಮಹಿಳೆ
ಲಾಕ್‌ಡೌನ್ ಕಾರಣದಿಂದ ಜನರು ಮನೆಗಳಲ್ಲೇ ಬಂಧಿಯಾಗಿರುವ ಕಾರಣದಿಂದ ಮಹಿಳೆಯರ ಮೇಲೆ ಕೌಟುಂಬಿಕ ದೌರ್ಜನ್ಯಗಳು ಇನ್ನಷ್ಟು ಹೆಚ್ಚುತ್ತಲೇ ಇವೆ ಎಂದು ಹೇಳಲಾಗಿದೆ.
ಎಂಟು ವರ್ಷಗಳ ಅವಧಿಯಲ್ಲಿ 158 ದೇಶಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದ್ದು, 15 ವರ್ಷ ಮೇಲ್ಪಟ್ಟ ಮಹಿಳೆಯರ ಮೇಲೆ ನಡೆಯಲಾದ ಲೈಂಗಿಕ ಕಿರುಕುಳಗಳು/ಒತ್ತಡಗಳ ಕುರಿತು ಅಧ್ಯಯನ ನಡೆಸಲಾಗಿದೆ.