alex Certify ತಲೆ ತಿರುಗಿಸುತ್ತೆ ಟಿಕ್​ ಟಾಕ್ ನಲ್ಲಿ ಯುವತಿ ಹೊಂದಿರುವ ಫಾಲೋವರ್ಸ್ ಸಂಖ್ಯೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆ ತಿರುಗಿಸುತ್ತೆ ಟಿಕ್​ ಟಾಕ್ ನಲ್ಲಿ ಯುವತಿ ಹೊಂದಿರುವ ಫಾಲೋವರ್ಸ್ ಸಂಖ್ಯೆ…!

ಅಮೆರಿಕದ ಅಪ್ರಾಪ್ತೆಯೊಬ್ಬಳು ಟಿಕ್​ಟಾಕ್​ನಲ್ಲಿ ಯಾರೂ ಮಾಡಿರದ ಸಾಧನೆಯನ್ನ ಮಾಡುವ ಮೂಲಕ ನೆಟ್ಟಿಗರು ಹುಬ್ಬೇರಿಸುವಂತೆ ಮಾಡಿದ್ದಾಳೆ.

ಟಿಕ್​ಟಾಕ್​ನಲ್ಲಿ ಬರೋಬ್ಬರಿ 100 ಮಿಲಿಯನ್​ ಫಾಲೋವರ್ಸ್​ ಗಳನ್ನ ಹೊಂದುವ ಮೂಲಕ ವಿಶ್ವದಲ್ಲೇ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಟಿಕ್​ಟಾಕರ್​ ಎಂಬ ಕೀರ್ತಿಗೆ ಪಾತ್ರಳಾಗಿದ್ದಾಳೆ.

ಚಾರ್ಲಿ ಡಿ ಅಮೆಲಿಯಾ ಎಂಬ 16 ವರ್ಷ ಪ್ರಾಯದ ನೃತ್ಯಗಾರ್ತಿ ಚೀನಾದ ಈ ಅಪ್ಲಿಕೇಶನ್​​ನಲ್ಲಿ ಹೊಸದೊಂದು ಸಾಧನೆ ಮಾಡಿದ್ದಾಳೆ. ಇನ್ನು ಈಕೆಯನ್ನ ಬಿಟ್ಟರೆ ಆಡಿಸನ್​ ರೋ ಎಂಬವರು 69.9 ಮಿಲಿಯನ್​ ಫಾಲೋವರ್ಸ್ ಹೊಂದಿದ್ದಾರೆ.

ಈಕೆ ಟಿಕ್​ಟಾಕ್​ನಲ್ಲಿ ತನ್ನ ನೃತ್ಯ ಸಾಮರ್ಥ್ಯ ತೋರಿಸುವ ಮೂಲಕ ಈ ಇಷ್ಟು ಫಾಲೋವರ್ಸ್​ ಪಡೆದಿದ್ದಾಳೆ. ಮಾತ್ರವಲ್ಲದೇ ನೇಲ್​ಪಾಲಿಶ್​ ಕಂಪನಿಯೊಂದರ ಜೊತೆಗೂ ಈಕೆ ಸಹಭಾಗಿತ್ವ ಹೊಂದಿದ್ದಾಳೆ. ಇಷ್ಟು ಮಾತ್ರವಲ್ಲದೇ ಕೆಲ ದಿನಗಳ ಹಿಂದಷ್ಟೇ ಹೊಸ ಸಿನಿಮಾವೊಂದಕ್ಕೆ ಸಹಿ ಹಾಕಿದ್ದಾಳೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...