ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್‌ವಾಚ್‌ಗಳು ಹಾಗೂ ಅವುಗಳಲ್ಲಿರುವ ಅಪ್ಲಿಕೇಶನ್‌ಗಳು ಜನರ ದಿನನಿತ್ಯದ ಬದುಕಿನ ರೀತಿಯನ್ನೇ ಬದಲಿಸಿಬಿಟ್ಟಿವೆ. ಇವುಗಳಿಂದ ನಮ್ಮ ಆರೋಗ್ಯದ ನಿರ್ವಹಣೆ, ಕೆಲಸ, ಸಂಪರ್ಕ ಸೇರಿದಂತೆ ಅನೇಕ ಕಾರ್ಯಗಳು ಸಾಗುತ್ತವೆ.
ಆದರೆ ಇಲ್ಲೊಬ್ಬ ವ್ಯಕ್ತಿಗೆ ಸ್ಮಾರ್ಟ್‌ವಾಚ್ ಒಂದರಿಂದ ಗ್ರಹಚಾರ ಕೆಟ್ಟಿರುವ ಘಟನೆ ಜರುಗಿದೆ.
ಬೆಳಗಿನ ಜಾವ 2 ಗಂಟೆಯ ವೇಳೆ ತನ್ನ ಬಾಯ್‌ಫ್ರೆಂಡ್ 500 ಕ್ಯಾಲೋರಿ ಬರ್ನ್ ಮಾಡಿರುವ ವಿಚಾರ ಆತನ ಸ್ಮಾರ್ಟ್‌ವಾಚ್ ಮೂಲಕ ತನಗೆ ತಿಳಿದುಬಂದ ವಿಷಯವನ್ನು ಯುವತಿಯೊಬ್ಬರು ವಿವರಿಸಿದ್ದಾರೆ. ಆ ವಾಚ್‌ನಲ್ಲಿದ್ದ ಫಿಟ್‌ಬಿಟ್ ಅಪ್ಲಿಕೇಶನ್ ಮೂಲಕ ಈ ವಿಚಾರ ತಿಳಿದು ಬಂದಿದೆ. ಎಸ್ಸೆಕ್ಸ್‌ನ ನಾಡಿಯಾ ಹೆಸರಿನ ಈ ಯುವತಿ ತನ್ನ ಸ್ಟೋರಿಯನ್ನು ಟಿಕ್‌ಟಾಕ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಮಹಿಳೆಯ ಒಳ ಉಡುಪು ಕದ್ದವರು ಅಂದರ್
”ನನ್ನ ಮಾಜಿ ಬಾಯ್‌ಫ್ರೆಂಡ್ ನೈಟ್ ಔಟ್ ಒಂದರಿಂದ ಬಂದ ಸಂದರ್ಭ, ನಾನು ಬೆಳಿಗ್ಗೆ ಎದ್ದು ಉಪಹಾರ ಸೇವಿಸೋಣ ಎಂದುಕೊಂಡೆ. ನನ್ನ ಫಿಟ್‌ಬಿಟ್ ಅಪ್ಲಿಕೇಶನ್‌ನಲ್ಲಿ ನನಗೆ ನೋಟಿಫಿಕೇಶನ್ ಬಂತು. ಕಳೆದ ಮುಂಜಾನೆ 2-3 ಗಂಟೆಯ ಅವಧಿಯಲ್ಲಿ ಆತ 500 ಕ್ಯಾಲೋರಿ ಬರ್ನ್ ಮಾಡಿದ್ದಾನೆ” ಎಂದು ಆತನ ಸ್ಮಾರ್ಟ್‌ವಾಚ್‌ನಲ್ಲಿದ್ದ ಫಿಟ್‌ಬಿಟ್ ಅಪ್ಲಿಕೇಶನ್ ತನ್ನ ಮೊಬೈಲ್ ಸಿಂಕ್ ಆಗಿರುವ ಕಾರಣ ತನಗೆ ಹೇಗೆ ಈ ವಿಷಯ ಅರಿವಿಗೆ ಬಂತು ಎಂದು ನಾಡಿಯಾ ವಿವರಿಸಿದ್ದಾರೆ.
ಆ ಅವಧಿಯಲ್ಲಿ 500 ಕ್ಯಾಲೋರಿ ಬರ್ನ್ ಮಾಡುವಂತದ್ದು ಆತ ಏನು ಮಾಡಿದ್ದ ಎಂದು ನಾಡಿಯಾ ಬಾಯಿ ಬಿಟ್ಟು ಹೇಳಲಿಲ್ಲ ಅಷ್ಟೇ. ಈ ವಿಡಿಯೋಗೆ ಇದುವರೆಗೂ ಲಕ್ಷಾಂತರ ವೀವ್ಸ್ ಸಿಕ್ಕಿದ್ದು ಸಾಕಷ್ಟು ಕಾಮೆಂಟ್‌ಗಳು ಬಂದಿವೆ.
https://www.youtube.com/watch?v=t2JoPT1nw40