alex Certify ಮಹಿಳೆಯ ಒಳ ಉಡುಪು ಕದ್ದವರು ಅಂದರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯ ಒಳ ಉಡುಪು ಕದ್ದವರು ಅಂದರ್

ಮಹಿಳೆ ಒಣಗಿಹಾಕಿದ್ದ ಒಳ ಉಡುಪುಗಳನ್ನ ಕದಿಯಲು ಹೋದ ಇಬ್ಬರು ಯುವಕರು ಜೈಲು ಪಾಲಾದ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಸಂಪೂರ್ಣ ದೃಶ್ಯ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು ಇದರಲ್ಲಿ ಯುವಕರು ಮಹಿಳೆ ಒಣಗಿ ಹಾಕಿದ್ದ ಒಳ ಉಡುಪುಗಳನ್ನ ಕದ್ದು ಬೈಕ್​ನಲ್ಲಿ ಎಸ್ಕೇಪ್​ ಆಗ್ತಿರೋದನ್ನ ನೋಡಬಹುದಾಗಿದೆ. ಉತ್ತರ ಪ್ರದೇಶದ ಮೀರತ್​ ಸದರ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ.

ಇಬ್ಬರು ಆರೋಪಿಗಳನ್ನ ಮೊಹಮ್ಮದ್​ ರೋಮಿನ್​ ಹಾಗೂ ಮೊಹಮ್ಮದ್​ ಅಬ್ದುಲ್​ ಎಂದು ಗುರುತಿಸಲಾಗಿದೆ. ತನಿಖೆ ವೇಳೆ ಇಬ್ಬರು ಆರೋಪಿಗಳು ತಮಾಷೆಗಾಗಿ ಈ ಕೃತ್ಯ ಎಸಗಿದ್ದೇವೆ ಎಂದು ತಪ್ಪೊಪ್ಪಿಕೊಂಡಿದ್ದಾರೆ. ಇಬ್ಬರೂ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್​ 379 ಹಾಗೂ 509 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಸಂಜಯ್​ ಚೌಧರಿ ಎಂಬವರು ಈ ವಿಡಿಯೋವನ್ನ ಚಿತ್ರೀಕರಿಸಿದ್ದು ಸದರ್ ಠಾಣೆಗೆ ದೂರು ನೀಡಿದ್ದಾರೆ. ತಮ್ಮ ಅಪ್ರಾಪ್ತ ಮಗಳು ಮನೆ ಹೊರಗೆ ಒಣಗಿ ಹಾಕಿದ್ದ ಪ್ಯಾಂಟಿಯನ್ನ ಈ ಇಬ್ಬರು ಕದ್ದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.‌

ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದ್ದಂತೆಯೇ ಟ್ವಿಟರ್​ನಲ್ಲಿ ಪ್ಯಾಂಟಿ ಚೋರ್​ ಅಬ್ದುಲ್​ ಎಂಬ ಹ್ಯಾಶ್​ಟಾಗ್​ನ ಅಡಿಯಲ್ಲಿ ಸಾಕಷ್ಟು ಟ್ವೀಟ್​ಗಳನ್ನ ಶೇರ್​ ಮಾಡಲಾಗ್ತಿದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...