alex Certify ಹಾರುವ ಆಮೆಯ ಎಲ್ಲಾದರೂ ನೋಡಿದ್ದೀರಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾರುವ ಆಮೆಯ ಎಲ್ಲಾದರೂ ನೋಡಿದ್ದೀರಾ…?

ಆಮೆಯ ಬಗ್ಗೆ ಸಾಮಾನ್ಯವಾಗಿ ಒಂದು ಕಲ್ಪನೆ ಇದೆ, ಸಾವಧಾನವಾಗಿ ಚಲಿಸುವ ಪ್ರಾಣಿ ಎಂಬುದು ಜನಜನಿತ. ಆದರೆ ಇತ್ತೀಚೆಗೆ ವೈರಲ್ ಆದ ಸುದ್ದಿ ಅಚ್ಚರಿ ಹುಟ್ಟಿಸುವಂತಿದೆ.

ಲ್ಯಾಟೊನ್ಯಾ ಎಂಬಾಕೆ ತನ್ನ ಸಹೋದರ ಕೆವಿನ್ ನೊಂದಿಗೆ ಕಾರಿನಲ್ಲಿ ಚಲಿಸುತ್ತಿದ್ದಾಗ ಏಕಾಏಕಿ ಮುಂಭಾಗದ ಗ್ಲಾಸ್ ಗೆ ವಸ್ತುವೊಂದು ಬಡಿದಿದೆ. ಬಡಿದ ರಭಸಕ್ಕೆ ಗ್ಲಾಸ್ ಒಡೆದಿದೆ. ಆದರೆ ಅಲ್ಲೊಂದು ಅಚ್ಚರಿ ಕಾದಿತ್ತು. ಅದು ಕಲ್ಲು ಅಥವ ಯಾವುದೇ ಗಟ್ಟಿ ಪದಾರ್ಥವಾಗಿರಲಿಲ್ಲ. ಬದಲಿಗೆ ಆಮೆ ಅಲ್ಲಿ ಕಂಡಿತ್ತು.

ಈ ಘಟನೆ ವೇಳೆ ಅವರಿಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದೆ. ಈ ವಿವರಗಳನ್ನು ಅವರು ಫೇಸ್ ಬುಕ್ ನಲ್ಲಿ ಫೋಟೋ ಸಹಿತ ಹಂಚಿಕೊಂಡಿದ್ದಾರೆ. ಕೆಲ ದಿನಗಳ ನಂತರ ಆಮೆ ರಕ್ತಸ್ರಾವದಿಂದ ಸತ್ತು ಹೋಗಿದೆ. ಆಮೆ ಯಾವ ರೂಪದಲ್ಲಿ ಕಾರಿನ ಮೇಲೆ ಅಪ್ಪಳಿಸಿತು? ಅಷ್ಟು ಎತ್ತರಕ್ಕೆ ಜಿಗಿದಿದ್ದಾದರು ಹೇಗೆ? ಎದುರಿನ ಗಾಜು ಪುಡಿಯಾಗುವಂತೆ ಅಷ್ಟೊಂದು ವೇಗ ಬಂದಿದ್ದಾದರೂ ಹೇಗೆ? ಹೀಗೆ ಅನೇಕ ಪ್ರಶ್ನೆಗಳು ಹುಟ್ಟಿಕೊಂಡಿದೆ.

My prior delimer… Mr Turtle was found at fault but he did not have insurance. He got escorted to the Wildlife reserve,…

Posted by Latonya Lark on Thursday, May 21, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...