ಭಾರಿ ಮಳೆ, ಹಿಮಪಾತ ದ ವೇಳೆ ಸೈಕ್ಲಿಂಗ್ ಮಾಡಿರುವುದನ್ನು ನೋಡಿರುತ್ತೇವೆ. ಆದರೆ ಆಲಿಕಲ್ಲು ಮಳೆಯಲ್ಲಿ ಸೈಕ್ಲಿಂಗ್ ಮಾಡಿದರೆ ಏನಾಗುತ್ತದೆ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆಯಿದೆ.
ಹೌದು, ಫ್ರಾನ್ಸ್ ಮೂಲದ 31 ವರ್ಷದ ಟೀಮ್ ಡಿಕ್ಲೇರೆಕ್ ಎನ್ನುವ ವ್ಯಕ್ತಿ ಸೈಕ್ಲಿಂಗ್ ಮಾಡುತ್ತಿರುವ ವೇಳೆ ಆಲಿಕಲ್ಲು ಮಳೆ ಶುರುವಾಗಿದ್ದು, ಅದರ ನಡುವೆ ಸೈಕ್ಲಿಂಗ್ ಮುಂದುವರಿಸಿದ್ದಾನೆ. ಬಳಿಕ ಆತನ ಬೆನ್ನಿನ ಮೇಲೆ ಎಲ್ಲ ಕೆಂಪು ಬಣ್ಣದ ಗಾಯಗಳಾಗಿದ್ದು, ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾನೆ.
ಸೈಕಲ್ ರೇಸ್ ಇದಿದ್ದರಿಂದ ಆಲಿಕಲ್ಲು ಮಳೆ ನಡುವೆ ಕೆಲವರು ಸೈಕ್ಲಿಂಗ್ ಮುಂದುವರಿಸಿದ್ದರಿಂದ ಈ ರೀತಿ ಆಗಿದೆ. ಟೀಮ್ ಜತೆ ಇನ್ನು ಕೆಲವರಿಗೂ ಇದೇ ರೀತಿಯ ಗಾಯಗಳಾಗಿವೆ. ಆದರೆ ಕೆಲ ಸಮಯದ ಬಳಿಕ ಟೀಮ್ ಬೆನ್ನಿನ ಮೇಲಿದ್ದ ಗಾಯಗಳೆಲ್ಲ ಕಡಿಮೆಯಾಗುತ್ತಿವೆ. ಆದ್ದರಿಂದ ಯಾವುದೇ ಸಮಸ್ಯೆ ಇಲ್ಲ ಎನ್ನಲಾಗಿದೆ. ಇದೀಗ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.