alex Certify ಮಹಿಳಾ ಸಂಗಾತಿ ಸೆಕ್ಸ್ ಆಸಕ್ತಿಯನ್ನು ಹೀಗೆ ಹೆಚ್ಚಿಸಿ…. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳಾ ಸಂಗಾತಿ ಸೆಕ್ಸ್ ಆಸಕ್ತಿಯನ್ನು ಹೀಗೆ ಹೆಚ್ಚಿಸಿ….

ಜೀವನದ ಮಹತ್ವದ ಭಾಗ ಸೆಕ್ಸ್. ಆದ್ರೆ ಸೆಕ್ಸ್ ಜೀವನದ ಬಗ್ಗೆ ಎಲ್ಲರ ಬಳಿ ಹೇಳಿಕೊಳ್ಳಲು ಸಾಧ್ಯವಿಲ್ಲ. ಲೈಂಗಿಕ ಜೀವನದಲ್ಲಿ ಸಮಸ್ಯೆ ಬಂದ್ರೂ ಅದನ್ನು ಹೇಳಿಕೊಳ್ಳುವುದಿಲ್ಲ. ಸಂಗಾತಿ ಮಧ್ಯೆಯೂ ಈ ಬಗ್ಗೆ ಚರ್ಚೆಯಾಗುವುದಿಲ್ಲ. ಮಹಿಳೆಯರು ಸೆಕ್ಸ್ ಗೆ ಸಂಬಂಧಿಸಿದಂತೆ ತಮ್ಮ ಆಸಕ್ತಿ ಅಥವಾ ಸೆಕ್ಸ್ ನಲ್ಲಿ ಕಾಣಿಸಿಕೊಳ್ತಿರುವ ನಿರಾಸಕ್ತಿಯನ್ನೂ ಸಂಗಾತಿ ಜೊತೆ ಹಂಚಿಕೊಳ್ಳುವುದಿಲ್ಲ. ನಿರಾಸಕ್ತಿಗೊಂಡಿರುವ ಮಹಿಳಾ ಸಂಗಾತಿಯ ಆಸಕ್ತಿ ಹೆಚ್ಚಿಸುವ ಟಿಪ್ಸ್ ಇಲ್ಲಿದೆ.

ಸಾಮಾನ್ಯವಾಗಿ ದಂಪತಿ ಒಂದೇ ಸ್ಥಳದಲ್ಲಿ ಸಂಭೋಗ ಬೆಳೆಸುತ್ತಾರೆ. ಬೆಡ್ ರೂಂ ಅವ್ರ ಫೆವರೆಟ್ ಜಾಗ. ಆದ್ರೆ ಒಂದೇ ಜಾಗದ ಸೆಕ್ಸ್ ಮಹಿಳಾ ಸಂಗಾತಿಗೆ ಬೇಸರ ತರಬಹುದು. ಹಾಗಾಗಿ ಮನೆಯ ಬೇರೆ ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳಿ. ಅಲ್ಲಿ ರೋಮ್ಯಾಂಟಿಕ್ ಇಲ್ಲವೆಂದ್ರೆ ಅದಕ್ಕೆ ರೋಮ್ಯಾಂಟಿಕ್ ಸ್ಪರ್ಶ ನೀಡಿ.

ಒಂದೇ ಭಂಗಿ, ಒಂದೇ ವಿಧಾನ ಸೆಕ್ಸ್ ಜೀವನವನ್ನು ಬೇಸರಗೊಳಿಸುತ್ತದೆ. ಸಂಭೋಗದಲ್ಲಿ ಹೊಸ ಪ್ರಯತ್ನಗಳು ನಡೆಯಬೇಕು. ಆದ್ರೆ ಹೊಸ ಪ್ರಯತ್ನದ ಭರದಲ್ಲಿ ಸಮಸ್ಯೆಗೆ ಸಿಲುಕಿಕೊಳ್ಳಬೇಡಿ.

ಒಂದೇ ಸ್ಥಳ, ಒಂದೇ ಭಂಗಿಯೊಂದೇ ಅಲ್ಲ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಖಾಸಗಿ ಅಂಗದ ನೋವು ಕೂಡ ಸೆಕ್ಸ್ ನಲ್ಲಿ ಆಸಕ್ತಿ ಕಳೆದುಕೊಳ್ಳುವಂತೆ ಮಾಡುತ್ತದೆ. ಖಾಸಗಿ ಅಂಗ ಶುಷ್ಕವಾದ್ರೆ ನೋವು ಹೆಚ್ಚಾಗುತ್ತದೆ. ನೈಸರ್ಗಿಕವಾಗಿ ಲ್ಯುಬ್ರಿಕೇಶನ್ ಆಗದೆ ಹೋದಲ್ಲಿ ಲ್ಯೂಬ್ ಬಳಕೆ ಮಾಡಿ. ಲ್ಯೂಬ್ ಬಗ್ಗೆ ಸರಿಯಾದ ಮಾಹಿತಿ ಪಡೆದ ನಂತ್ರವೇ ಅದನ್ನು ಬಳಸಿ.

ಸಂಭೋಗಕ್ಕಿಂತ ಅದ್ರ ಮೊದಲು ನಡೆಯುವ ಪ್ರೀತಿ ಮಹಿಳೆಯರಿಗೆ ಇಷ್ಟವಾಗುತ್ತದೆ. ಹಾಗಾಗಿ ಆರಂಭದಲ್ಲಿ ಮಹಿಳೆಯರಿಗೆ ಉತ್ತೇಜನ ನೀಡುವ ಅಂಗಗಳನ್ನು ಸ್ಪರ್ಶಿಸಿ, ನಿಧಾನವಾಗಿ ಮುಂದುವರೆಯಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...