ಭಾರೀ ಚರ್ಚೆಗೆ ಗ್ರಾಸವಾಗಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಪ್ರಕ್ರಿಯೆಗಳು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಹುದ್ದೆ ತೆರವು ಮಾಡುತ್ತಲೇ ಸದ್ದಿಲ್ಲದಂತೆ ಆಗಿವೆ.
ಅಮೆರಿಕದಲ್ಲಿ ಚುನಾಯಿತರಾದ ಅಧಿಕಾರಿಗಳ ಶೈಕ್ಷಣಿಕ ಹಾಗೂ ಇತರೆ ಅರ್ಹತೆಗಳ ಕುರಿತಂತೆ ಮಾತನಾಡಲಾದ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅಮೆರಿಕದ ಚುನಾವಣಾ ಪ್ರಕ್ರಿಯೆಗಳಲ್ಲಿರುವ ಲೋಪದೋಷಗಳ ಕುರಿತಂತೆ ಮಹಿಳೆಯೊಬ್ಬರು ಮಾತನಾಡುವುದನ್ನು ನೋಡಬಹುದಾಗಿದೆ.
ರಾತ್ರೋ ರಾತ್ರಿ 2 ಲಕ್ಷಕ್ಕೂ ಹೆಚ್ಚು ಹಣ ಸಂಪಾದಿಸಿದ 10 ವರ್ಷದ ಬಾಲಕ…!
ಅಮೆರಿಕ ಕಾಂಗ್ರೆಸ್‌ನಲ್ಲಿ ಹುದ್ದೆಗಳು ಖಾಲಿ ಇಲ್ಲವೆಂದಿರುವ ಈ ಮಹಿಳೆ, ನಾಗರಿಕ ಸೇವಕರ ಆಯ್ಕೆ ಪ್ರಕ್ರಿಯೆ ವೇಳೆ ಯಾವುದೇ ಹಿನ್ನೆಲೆಯ ಚೆಕಿಂಗ್ ಆಗಲೀ, ನಿಯಮಗಳನ್ನಾಗಲೀ ಸ್ಥಾಪಿಸಿಲ್ಲವೆಂದಿರುವ ಈಕೆ ಈ ವ್ಯವಸ್ಥೆಯನ್ನು ನಿರ್ವಹಿಸಲು ಸೂಕ್ತವಾದ ಮಾನವ ಸಂಪನ್ಮೂಲ ಇಲಾಖೆಯೇ ಇಲ್ಲವೆಂದಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸಲು ವಯಸ್ಸಿನ ಮಿತಿ ನಿಗದಿಪಡಿಸಿದ್ದರೂ ಸಹ ಶೈಕ್ಷಣಿಕ ಅರ್ಹತೆಯನ್ನಾಗಲೀ ಅಥವಾ ಕ್ರಿಮಿನಲ್ ಹಿನ್ನೆಲೆ ಇದೆಯೇ ಎಂದು ಖಾತ್ರಿ ಪಡಿಸಲು ಅವಕಾಶ ಇಲ್ಲದೇ ಇರುವುದನ್ನು ಪ್ರಶ್ನಿಸಿರುವ ಈ ಮಹಿಳೆ, ಒಬ್ಬ ಪ್ರಜೆಗೆ ತಾನು ಕ್ರಿಮಿನಲ್ ಎಂದು ಸಾಬೀತಾದಲ್ಲಿ ಆತನ ಮತದಾನದ ಹಕ್ಕನ್ನು ಕಸಿಯಲಾಗುತ್ತದೆ ಆದರೆ ಸರ್ಕಾರಿ ಹುದ್ದೆಗಳಲ್ಲಿ ಇರುವ ಮಂದಿಗೆ ಮಾತ್ರ ಇವೆಲ್ಲಾ ಅನ್ವಯವಾಗದು ಎಂದಿದ್ದಾರೆ.
https://twitter.com/Nebula_Surfer27/status/1355473572790202372?ref_src=twsrc%5Etfw%7Ctwcamp%5Etweetembed%7Ctwterm%5E1355473572790202372%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fwell-take-anyone-woman-drops-truth-bombs-about-us-elections-in-viral-video-wins-twitters-vote-3365600.html