ಲಿಬಿಯಾದಿಂದ ಇಟಲಿಗೆ ಪ್ರಯಾಣಿಸುವ ವೇಳೆ ದೋಣಿ ಪಲ್ಟಿಯಾದ ಪರಿಣಾಮ ಕಳೆದುಹೋಗಿದ್ದ ದಂಪತಿಯ ವಿವಾಹದ ಉಂಗುರ ಕೆಲವು ತಿಂಗಳ ಬಳಿದ ಬಳಿಕ ಮೆಡಿಟರೇನಿಯನ್ನಲ್ಲಿ ಪತ್ತೆಯಾಗಿದೆ.
ರಕ್ಷಿಸಲ್ಪಟ್ಟ ದೋಣಿಯೊಂದರಲ್ಲಿ ಬ್ಯಾಗ್ ದೊರೆತಿದ್ದು ಇದರಲ್ಲಿ ಒಂದೆರಡು ಟೀ ಶರ್ಟ್, ಬೂಟುಗಳು ಹಾಗೂ ಎರಡು ಉಂಗುರಗಳು ದೊರೆತಿವೆ.
ದೋಣಿ ಅಪಘಾತಕ್ಕೀಡಾದ ಸಂದರ್ಭದಲ್ಲಿ ಅದರಲ್ಲಿ 20 ಮಂದಿ ಪ್ರಯಾಣಿಕರಿದ್ದರು. ಈ ದುರಂತದಲ್ಲಿ ಅಲ್ಜೀರಿಯಾದ ಅಹಮದ್ ಹಾಗೂ ಡೌಡೌ ಬದುಕುಳಿದರು. ಆದರೆ ದೋಣಿಯಲ್ಲಿದ್ದ ಇತರೆ 5 ಮಂದಿ ಸಾವಿಗೀಡಾದ್ರು.
ರಕ್ಷಣಾ ಪಡೆ ಈ ಬ್ಯಾಗ್ ಹಾಗೂ ಉಂಗುರದ ವಿವರಗಳನ್ನ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದೆ. ಬಳಿಕ ಈ ಬ್ಯಾಗ್ ಅಹಮದ್ ಎಂಬವರಿಗೆ ಸೇರಿದ್ದು ಎಂಬ ವಿಚಾರ ತಿಳಿದು ಬಂದಿದೆ.