alex Certify ಕರೋನಾ ನಡುವೆ ನಡೆದಿದೆ ಗೊಂಬೆಗಳ ಮದುವೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರೋನಾ ನಡುವೆ ನಡೆದಿದೆ ಗೊಂಬೆಗಳ ಮದುವೆ…!

ಅಮೆರಿಕಾ: ಅವರು ಮಾಡಿದ‌ ವೆಡ್ಡಿಂಗ್ ಫೋಟೋ ಶೂಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ 40 ಸಾವಿರ ಜನ ಶೇರ್ ಮಾಡಿದ್ದಾರೆ. 28 ಸಾವಿರ ಜನ ರಿಯಾಕ್ಟ್ ಮಾಡಿದ್ದಾರೆ. ಆದರೆ, ಇದು ನಿಜವಾದ ವಧು-ವರರ ಫೋಟೋ ಶೂಟ್ ಅಲ್ಲ. ಬಾರ್ಬಿ ಡಾಲ್ – ಕೆನ್ ಮದುವೆಯದ್ದು.‌

ಹೌದು, ಕರೋನಾ ಲಾಕ್‌ ಡೌನ್ ಮದುವೆಗಳನ್ನು ರದ್ದು ಮಾಡಿದೆ. ಫೋಟೋಗ್ರಾಫರ್ ಗಳು ಮನೆಯಲ್ಲಿ ಕೂರುವಂತಾಗಿದೆ, ಇಂಥ ಸಂದರ್ಭದಲ್ಲಿ ಅಮೆರಿಕಾದ ಅಗ್ನೇಜ್ಕಾ ಮಾರ್ಷ್ ಎಂಬ ಮಹಿಳಾ ಫೋಟೋಗ್ರಾಫರ್ ತಮ್ಮ‌ ಮಗಳ ಬಾರ್ಬಿ ಡಾಲ್ ಗಳನ್ನು ಬಳಸಿ ಕ್ರಿಶ್ಚಿಯನ್ ಮದುವೆಯ ದೃಶ್ಯಗಳನ್ನು ಸೃಷ್ಟಿಸಿದ್ದಾರೆ.

ಬಾರ್ಬಿ ಡಾಲ್ ವಧುವಾದರೆ ವರನನ್ನು ಲೂಯೀಸ್ ಟೊಮ್ಲಿನ್ನ್ಸನ್ ಸೃಷ್ಟಿಸಿಕೊಟ್ಟಿದ್ದಾರೆ. ಮಾರ್ಷ್ ಮದುಮಗ ಶೇವಿಂಗ್, ವಧುವಿನ ಅಲಂಕಾರದಿಂದ ಹಿಡಿದು ಎಲ್ಲ ಸನ್ನಿವೇಶಗಳನ್ನು ಸೃಷ್ಟಿ ಮಾಡಿ ತಮ್ಮದೇ ಮನೆ ಗಾರ್ಡನ್ ನಲ್ಲೇ ಫೋಟೊ ಮಾಡಿದ್ದಾರೆ. ಅವರ ಪತಿ ಇದಕ್ಕೆ ಕೊಂಚ ಸಹಕಾರ ನೀಡಿದ್ದಾರೆ. ಇನ್ನೂ ವಿಶೇಷ ಎಂದರೆ ಈ‌ ಮದುವೆಗೆ ಬ್ಯಾಟ್ ಮ್ಯಾನ್, ಸೂಪರ್ ಮ್ಯಾನ್, ಐರನ್ ಮ್ಯಾನ್, ಕ್ಯಾಪ್ಟನ್ ಅಮೆರಿಕ ಮುಂತಾದವರು ಅತಿಥಿಯಾಗಿ ಬಂದಿದ್ದಾರೆ.‌

BARBIE AND KEN’S* BIG DAY After the interest in the engagement shoot of Barbie and Louis, (*It was highlighted to me…

Posted by Agnieszka Marsh Photography on Monday, April 13, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...