ಬೀಜಿಂಗ್ನ 600 ವರ್ಷಗಳಷ್ಟು ಪುರಾತನವಾದ ಡ್ರಮ್ ಕೆಳಗಿರುವ ಯಾವೋಚಿ ಚೋಗನ್ ನೂಡಲ್ ರೆಸ್ಟೋರೆಂಟ್ ಒಂದು ಜೋ ಬಿಡೆನ್ ಅಮೆರಿಕ ಅಧ್ಯಕ್ಷರಾದ ಬಳಿಕ ಸುದ್ದಿಯಲ್ಲಿದೆ. ಈ ರೆಸ್ಟೋರೆಂಟ್ ತಮಗೆ ಬಿಡೆನ್ ದಶಕಗಳಷ್ಟು ಹಳೆಯ ಸಂಪರ್ಕವಿದೆ ಅಂತಾ ಹೇಳಿಕೊಂಡಿದೆ.
ಅಮೆರಿಕದ ಉಪಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅಂದರೆ 2011ರಲ್ಲಿ ಈ ರೆಸ್ಟಾರೆಂಟ್ಗೆ ಭೇಟಿ ನೀಡಿದ್ದ ಬಿಡೆನ್ರ ಫೋಟೋವನ್ನ ರೆಸ್ಟೋರೆಂಟ್ನ ಗೋಡೆಗೆ ತೂಗು ಹಾಕಲಾಗಿದೆ.
ಯಾವೋಚಿ ಹೋಟೆಲ್ನ ವ್ಯವಸ್ಥಾಪಕರಿಗೆ ಬಿಡೆನ್ ಜೊತೆ ನಿಕಟ ಸಂಪರ್ಕವಿದೆಯಂತೆ. ಬಿಡೆನ್ ಅಧ್ಯಕ್ಷರಾಗಿ ಆಯ್ಕೆಯಾದ ವಿಚಾರ ಕೇಳಿ ತುಂಬಾನೇ ಸಂತಸವಾಯ್ತು. ನಾವು ಹಳೆಯ ಸ್ನೇಹಿತರು. ಬಿಡೆನ್ ಹರ್ಷ ಮನಸ್ಥಿತಿಯ ವ್ಯಕ್ತಿ. ದಯೆ, ಕರುಣೆಯ ಮನೋಭಾವ ಬಿಡೆನ್ರಲ್ಲಿದೆ ಅಂತಾ ಹೇಳಿದ್ರು.